ಖ್ಯಾತ ನಟಿ ಕಂಗನಾ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು..!

ಬಾಲಿವುಡ್ ನಲ್ಲಿ ಇತ್ತೀಚೆಗೆ ಡ್ರಗ್ಸ್ ವಿಚಾರವಾಗಿ ಧ್ವನಿ ಎತ್ತಿದಂತಹ ನಟಿ ‘ಕಂಗನಾ ರಣೌತ್’. ಈಕೆಯ ಬೆಂಬಲಕ್ಕೆ ಸಾಕಷ್ಟು ಸ್ಟಾರ್ ನಟ-ನಟಿಯರು,ರಾಜಕರಣೀಗಳು ಕೂಡ ಸಾಥ್ ಕೊಟ್ಟಿದ್ದರು. ಆದ್ರೆ ಈಗ ಕಂಗನಾ ವಿರುದ್ದ ಮಾನನಷ್ಟ ಮೊಕದಮ್ಮೆಯನ್ನು ಏರಲಾಗಿದೆ.ಹೌದು ಬಾಲಿವುಡ್ ನ ಖ್ಯಾತ ನಟ ಸುಶಾಂತ್ ಸಾವಿನ ಬೆನ್ನಲ್ಲೇ ನಟಿ ಕಂಗನಾ ಡ್ರಗ್ಸ್ ವಿಚಾರವಾಗಿ ಧ್ವನಿ ಎತ್ತಿದ್ದರು. ಯಾರ್ಯಾರು ಡ್ರಗ್ಸ್ ದಂಧಯಲ್ಲಿ ಭಾಗಿಯಾಗಿದ್ದಾರೆಂಬುವುದರ ಬಗ್ಗೆ ಕೆಲ ಮಾಹಿತಿಯನ್ನು ಕೂಡ ಹೊರ ಹಾಕಿದ್ದರು. ಆದ್ರೆ ನಟಿ ಕಂಗನಾ ಕೆಲದಿನಗಳ ಹಿಂದೆ ಬಾಲಿವುಡ್ ನ ಗೌರವಾನ್ವಿತ ಚಿತ್ರಕಥೆಗಾರ, ಸಾಹಿತಿ ಜಾವೇದ್ ಅಖ್ತರ್ ವಿರುದ್ದ ಹಲವು ವಿವಾದಾತ್ಮಾಕ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆ ಈಗ ನಟಿ ಕಂಗನಾಗೆ ಮುಳುವಾಗಿದೆ. ಖ್ಯಾತ ಸಾಹಿತಿ ಜಾವೇದ್ ಅಖ್ತರ್ ನಟಿ ಕಂಗನಾ ವಿರುದ್ದ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದು, ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಸಂಧಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.ಇನ್ನೂ ಹೃತಿಕ್ ರೋಶನ್ ಹಾಗೂ ನನ್ನ ನಡುವಿನ ವಿವಾದದ ಬಗ್ಗೆ ಜಾವೇದ್ ಅಖ್ತರ್ ನನ್ನನ್ನು ಮನೆಗೆ ಕರೆಸಿ ಬೆದರಿಕೆ ಹಾಕಿದ್ದರು, ‘ಹೃತಿಕ್ ರೋಶನ್, ರಾಕೇಶ್ ರೋಶನ್ ಅವರುಗಳು ಬಹಳ ದೊಡ್ಡ ವ್ಯಕ್ತಿಗಳು, ನಿನ್ನ ಹಾಗೂ ಹೃತಿಕ್ ಸಂಬಂಧದ ವಿಷಯವನ್ನು ದೊಡ್ಡದು ಮಾಡಬೇಡ, ಹೃತಿಕ್ ಬಳಿ ಕ್ಷಮಾಪಣೆ ಕೇಳು ಇಲ್ಲವಾದರೆ ನೀನು ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪುತ್ತೀಯಾ ಎಂದು ಜಾವೇದ್ ಬೆದರಿಕೆ ಹಾಕಿದ್ದರು ಎಂದು ಸಂದರ್ಶನದಲ್ಲಿ ಹೇಳಿದ್ದರು. ಕಂಗನಾ ಈ ಹೇಳಿಕೆ ಜಾವೇದ್ ಅಖ್ತರ್ ನನ್ನು ಕೆರಳಿಸಿದೆ. ಇಂತಹಾ ಆರೋಪಗಳಿಗೆ ಹೆಚ್ಚು ಪ್ರತಿಕ್ರಿಯಿಸದ ಜಾವೇದ್ ಆದರೆ ಕಂಗನಾ ರಣೌತ್ ಅವರ ಆರೋಪದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾನನಷ್ಟ ಮೊಕದ್ದಮೆ ಹೂಡಿರುವ ಜಾವೇದ್, ಈ ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವುದಿಲ್ಲ, ಎಷ್ಟು ದೀರ್ಘವಾದ ಹೋರಾಟವಾದರೂ ಸಹಿ ತಯಾರಿದ್ದೇನೆ ಎಂದಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment