ಗ್ರಾಮೀಣ ಕೂಲಿ ಕಾರ್ಮಿಕರ ಒಕ್ಕೂಟದಿಂದ ಪ್ರತಿಭಟನೆ..!

ವಿಶ್ವವನ್ನೆ ಆರ್ಥಿಕವಾಗಿ ಶದೆಬಡಿದ ಮಾಹಮಾರಿ ಕಾಯಿಲೆ ಕೋವಿಡ್ 19 ಕೊರೋನಾ ಹಿನ್ನಲೆ ದೇಶದ ಜಿಡಿಪಿ ಕುಸಿತದಿಂದ ಬಹುತೇಕ ದೊಡ್ಡ ದೊಡ್ಡ ಕಾರ್ಖಾನೆ, ಸಾಪ್ಟ್ ವೇರ್ ಕಂಪನಿಗಳ ಬಾಗಿಲು ಬಂದಾಗಿದೆ. ಲಾಕ್ಡೌನ್ ನಿಂದ ಉದ್ಯೋಗ ಕಳೆದುಕೊಂಡ ಲಕ್ಷಾಂತರ ಕುಟುಂಬಗಳು, ವಲಸೆ ಕಾರ್ಮಿಕರು ಕೆಲಸವಿಲ್ಲದೆ ತುತ್ತು ಅನ್ನಕ್ಕೂ ಪರಿತಪಿಸುವಂತಾಗಿದೆ. ಲಕ್ಷಾಂತರ ಕುಟುಂಬಗಳು ಪಟ್ಟಣದಿಂದ ಹಳ್ಳಿ ಕಡೆ ಮುಖಮಾಡಿ ಮರಳಿ ತಮ್ಮ ಗ್ರಾಮಗಳಿಗೆ ಬಂದಿದ್ದಾರೆ.ನರೆಗ ಉದ್ಯೋಗ ಖಾತರಿ ಯೋಜನಡೆ ಅಡಿ ಸರಕಾರ ನಿಗದಿ ಪಡಿಸಿದ ನೂರು ದಿನಗಳ ಕೆಲಸವನ್ನು ಸಾವಿರಾರು ಕುಟುಂಬಗಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೂರು ದಿನಗಳ ಕೆಲಸ ಈಗಾಗಲೇ ಮಾಡಿ ಮುಗಿಸಿದ್ದಾರೆ. ಸದ್ಯ ಉದ್ಯೋಗವಿಲ್ಲದೆ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ತಕ್ಷಣ ಸರಕಾರ ಎಚ್ಚೇತ್ತುಕೊಂಡು ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಮಾನವ ದಿನಗಳನ್ನು ಎರಡನೂರು ದಿನಗಳಿಗೆ ಹೆಚ್ಚಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ನೇತ್ರತ್ವದಲ್ಲಿ ಪಟ್ಟಣದ ತಾಲೂಕಾ ದಂಡಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಪಡಿತರ ಚೀಟಿಯಲ್ಲಿ ಸದಸ್ಯರಿಗೆ ತಲಾ ಐದು ಕೆಜಿ ಹೆಚ್ಚಿನ ಆಹಾರ ದವಸಧಾನ್ಯವನ್ನು ಆರು ತಿಂಗಳ ಮಟ್ಟಿಗೆ ಹೆಚ್ಚಿಸಿ ಕೂಲಿ ಕಾರ್ಮಿಕರಿಗೆ ನಿಡಬೇಕೆಂದು ಆಗ್ರಹಿಸಿ ಸರಕಾರಕ್ಕೆ ಸಿಂದಗಿ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಟನೆಯಲ್ಲಿ ಬಾಗವಹಿಸಿದ ಜೈ ಕರ್ನಾಟಕ ತಾಲೂಕಾಧ್ಯಕ್ಷ ಪರಶುರಾಮ ಕೊಟರಗಸ್ತಿ, ಮಲ್ಲಮ್ಮ ಸಜ್ಜನ, ಯಂಕಮ್ಮ ವಡರ, ಕಾಂತಮ್ಮ ಬರಗಾಲ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಬಾಗವಹಿಸಿದರು

ವರದಿ: ಅಂಬರೀಶ್ ಎಸ್ ಎಕ್ಸ್ ಪ್ರೆಸ್ ಟಿವಿ ಸಿಂದಗಿ

Please follow and like us:

Related posts

Leave a Comment