ಉಪ್ಪಾರ ಸಮಾಜದ ಬಗ್ಗೆ ನಿಂದನೆ ಆರೋಪ-ಶಾಸಕ ಕೆ ಮಹಾದೇವ್

ಪಿರಿಯಾಪಟ್ಟಣ: ಉಪ್ಪಾರ ಸಮಾಜದ ಮುಖಂಡ ದಿವಂಗತ ಸಣ್ಣಮೊಗೆ ಗೌಡರ ಬಗ್ಗೆ ಹಾಗೂ ಉಪ್ಪಾರ ಸಮಾಜದ ಬಗ್ಗೆ ಪಿರಿಯಾಪಟ್ಟಣ ಶಾಸಕ ಕೆ ಮಹದೇವ್ ಅವಹೇಳನಕಾರಿಯಾಗಿ ಮಾತನಾಡಿದ್ದು ಅವರ ವಿರುದ್ಧ ನವೆಂಬರ್ 11 ರಂದು ಪಿರಿಯಾಪಟ್ಟಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಚಾಮರಾಜನಗರ ಜಿಲ್ಲಾ ಉಪ್ಪಾರ ಸಂಘದ ಕಾರ್ಯಾಧ್ಯಕ್ಷ ಪಿ ಎಸ್ ವಿಷಕಂಠಯ್ಯ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಿ ಎಸ್ ವಿಷಕಂಠಯ್ಯ ಶಾಸಕ ಕೆ ಮಹದೇವ್ ಇತ್ತೀಚೆಗೆ ನಡೆದ ಸರ್ಕಾರಿ ಸಭೇಯೊಂದರಲ್ಲಿ 2013 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತದಾನದ ದಿನ ಇನ್ನೇನು 3 ದಿನಗಳು ಮಾತ್ರ ಬಾಕಿ ಇರುವಾಗ ಚುನಾವಣೆಗೆ ಸ್ಪರ್ಧಿಸಿದ್ದ ಯಾವನೋ ಒಬ್ಬ ದರಿದ್ರ ಸತ್ತುಹೋದ ಅವತ್ತೇ ನಾನು ಸತ್ತು ಹೋದೆ ಇಲ್ಲದಿದ್ದರೆ ಅಂದೇ ನಾನು 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಿದ್ದೆ .ಇವನ ಸಾವಿನ ಕಾರಣ ನಾನು ಸೋತು ಹೋದೆ ಎಂದು ದಿವಂಗತ ಸಣ್ಣ ಮೊಗೇಗೌಡರ ಸಾವನ್ನು ಕುರಿತು ಕೀಳುಮಟ್ಟದಲ್ಲಿ ಸಂಭ್ರಮಿಸುವ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಉಪ್ಪಾರ ಸಂಘದ ಅಧ್ಯಕ್ಷ ಜಯಶಂಕರ್ ಮಾತನಾಡಿ ಉಪ್ಪಾರ ಜನಾಂಗವನ್ನು ನಿಂದಿಸಿರುವ ಶಾಸಕ ಕೆ ಮಹದೇವ್ ಬಹಿರಂಗ ಕ್ಷಮೆ ಯಾಚಿಸಬೇಕು. ನವೆಂಬರ್ 11 ರಂದು ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ಬಿಎಂ ರಸ್ತೆ ಮೂಲಕ ಕಾಲ್ನಡಿಗೆಯಲ್ಲಿ ಸಾಗಿ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಬೇಕಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಅನಿಲ್ ಕುಮಾರ್, ಮಾಕೋಡು ಜವರಪ್ಪ ,ನಾರಾಯಣ್ , ಮೈಲಾರಪ್ಪ,ಪಿ ಜೆ ರವಿ,ವೀರ್ ಭದ್ರ ಹರೀಶ್’ ಎಲೆಮಂಜು ಪ್ರವೀಣ್ ಹಾಜರಿದ್ದರು.
ವರದಿ-ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Please follow and like us:

Related posts

Leave a Comment