ಖೇಲೋ ಇಂಡಿಯಾ ಕೂಟದಲ್ಲಿ ಆಡಲು ಅವಕಾಶ ನೀಡುತ್ತೇವೆಂದು ಹೇಳಿ ವಂಚನೆ

ನವದೆಹಲಿ: ಮುಂದಿನ ವರ್ಷ ಹರ್ಯಾಣದ ಪಂಚಕುಲದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಕೂಟದಲ್ಲಿ ಆಡಲು ಅವಕಾಶ ನೀಡುತ್ತೇವೆಂದು ಹೇಳಿ, ದೇಶಾದ್ಯಂತ ಅಥ್ಲೀಟ್ಗಳನ್ನು ವಂಚಿಸಿದ್ದ ಮೂವರನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಎರಡು ದಿನಗಳ ಹಿಂದೆ ನೀಡಿದ್ದ ದೂರನ್ನು ಆಧರಿಸಿ ಈ ಬಂಧನವಾಗಿದೆ. ವಂಚನೆಯಲ್ಲಿ ಒಬ್ಬ ಮಾಜಿ ಕಬಡ್ಡಿ ಪಟು ಕೂಡಾ ಸೇರಿದ್ದು, ಸಾಮಾಜಿಕ ತಾಣಗಳಲ್ಲಿ ಪುಟವನ್ನು ತೆರೆದಿದ್ದ ವಂಚಕರು, ಅಲ್ಲಿ ಕೂಟದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಿದ್ದರು. ಅದಕ್ಕಾಗಿ ತಲಾ 6,000 ರೂ. ಪಾವತಿಸಬೇಕೆಂದು ತಿಳಿಸಿದ್ದರು.ಆರೋಪಿಗಳನ್ನು ಸಂಜಯ್ ಪ್ರತಾಪ್ ಸಿಂಗ್, ಅನುಜ್ಕುಮಾರ್, ರವಿ ಎಂದು ಗುರುತಿಸಲಾಗಿದೆ. ಇದರಲ್ಲಿ ಸಂಜಯ್ ಆಗ್ರಾದ ಮಾಜಿ ಕಬಡ್ಡಿ ಆಟಗಾರ.ಅವರು ರುದ್ರಪ್ರತಾಪ್ ಸಿಂಗ್ ಎಂಬ ಹೆಸರಿನಲ್ಲಿ ನಕಲಿ ಗುರುತಿನ ಪತ್ರ ತಯಾರಿಸಿಕೊಂಡಿದ್ದರು. ಇದರ ಮೂಲಕವೇ ಜನರನ್ನು ವಂಚಿಸುತ್ತಿದ್ದರು. ಈ ಆಟಗಾರರ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment