ಶಾಸಕ ಎಸ್‍ ಎನ್ ನಾರಾಯಣಸ್ವಾಮಿ ವಿರುದ್ಧ ಪ್ರತಿಭಟನೆ..!

ಬಂಗಾರಪೇಟೆಃ ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್ಎ ನ್ ನಾರಾಯಣಸ್ವಾಮಿ ಅವ್ರ ಮಾಲೀಕತ್ವದ, ಎಸ್ಎರನ್ ಸಿಟಿ ಬಡಾವಣೆಯಲ್ಲಿನ ಸರ್ವೇ ನಂಬರ್ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು, ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗು ಹಸಿರುಸೇನೆ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಬಂಗಾರಪೇಟೆ ಕೋಲಾರ ಮಾರ್ಗದ ಹಂಚಾಳ ಗೇಟ್ ರಸ್ತೆಯನ್ನ ತಡೆದ ಹೋರಾಟಗಾರರು ಬಂಗಾರಪೇಟೆ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ವಿರುದ್ದ ದಿಕ್ಕಾರಗಳನ್ನ ಕೂಗಿದ್ರು. ಎಸ್ ಎನ್ ಸಿಟಿಯನ್ನ ಅಭಿವೃದ್ದಿ ಪಡಿಸುವ ಮೊದಲು, ಸರ್ವೇ ನಂಬರ್ 35 ರ ಬ್ಲಾಕ್ 2 ರಲ್ಲಿರುವ 36 ಗುಂಟೆಯಲ್ಲಿ ತಹಶೀಲ್ದಾರ್ ಕಚೇರಿಯ ಈ ನಕ್ಷೆ ಪ್ರಕಾರ ಅದು ಸಾರ್ವಜನಿಕರ ರಸ್ತೆಯಾಗಿದೆ ಎಂದು ಆರೋಪಿಸಿದ್ದಾರೆ. ಇನ್ನು ಸರ್ವೇ ನಂಬರ್ 36 ರಲ್ಲಿ ಗುಂಡು ತೋಪಿನ 35 ಗುಂಟೆ ಜಾಗದಲ್ಲಿ ದೇವಸ್ಥಾನವನ್ನ ನಿರ್ಮಿಸಿದ್ದು, ಇದು ಕಾನೂನು ಬಾಹಿರ ಎಂದು, ರೈತ ಸಂಘದ ಮುಖಂಡರು ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಅವರಿಗೆ ಮನವಿ ಸ್ಲಲಿಸಿ, ಒತ್ತುವರಿ ತೆರವಿಗೆ ಆಗ್ರಹಿಸಿದ್ದಾರೆ. ಆದ್ರೆ ರೈತ ಸಂಘದ ಆರೋಪವನ್ನ ಶಾಸಕ ನಾರಾಯಣಸ್ವಾಮಿ ತಳ್ಳಿಹಾಕಿದ್ದು, ಒತ್ತುವರಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Please follow and like us:

Related posts

Leave a Comment