ಬಾದಾಮಿ ನೂತನ ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆ..!

ಬಾಗಲಕೋಟೆ; ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಪೊಲೀಸ್ ಠಾಣೆಯ ಕಟ್ಟಡ ನವೀಕರಣದ ಉದ್ಘಾಟನೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಲೋಕೇಶ್, ಜಗಲಾಸರ ಉದ್ಘಾಟಿಸಿದರು. ವರ್ಷವಿಡೀ ಖಾಕಿ ಸಮವಸ್ತ್ರ ಧರಿಸಿ ಕರ್ತವ್ಯ ನಿಭಾಯಿಸುವ ಆರಕ್ಷಕರು ಇಂದು ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದು ವಿಶೇಷವಾಗಿತ್ತು. ಪುರುಷರು ಕಡುಕೆಂಪು ಅಂಗಿ ತಿಳಿಹಳದಿ ಪಂಚೆ ಹೆಗಲಿಗೆ ಶಾಲ್ ಧರಿಸಿದರೆ ಮಹಿಳಾ ಆರಕ್ಷಕರು ಕಡುನೀಲಿ ಬಣ್ಣದ ಸೀರೆ ಹಾಗೂ ಕೆಂಪು ಕುಪ್ಪಸ ಧರಿಸಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಎಲ್ಲ ಆರಕ್ಷಕ ಠಾಣೆ ಸಿಬ್ಬಂದಿ ಉತ್ಸಾಹದಿಂದ ಸಂತಸದಿಂದ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಲೋಕೇಶ್, ಜಗಲಾಸರ,ಡಿ. ವಯ್. ಎಸ್. ಪಿ. ಚಂದ್ರಕಾಂತ.ನಂದರಡ್ದಿ.ಸಿ.ಪೀ. ಆಯ್.ರಮೇಶ್.ಹಾನಾಪೂರ, ಪಿ.ಎಸ್.ಐ.ಪ್ರಕಾಶ, ಬಣಕಾರ ಬಾದಾಮಿ ಆರಕ್ಷಕ ಠಾಣೆಯ ಎಲ್ಲ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವರದಿ-ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment