ಮೀನುಗಾರರ ಸಹಕಾರ ಸಂಘದ ವತಿಯಿಂದ ಶ್ರೀ ವಾಲ್ಮಿಕಿ ಜಯಂತಿ ಆಚರಣೆ..!

ಗಂಗಾ ಪರಮೇಶ್ವರಿ ಮೀನುಗಾರ ಸಹಕಾರ ಸಂಘ ಹಾಗೂ ಮೀನು ಮಾರುಕಟ್ಟೆ ವತಿಯಿಂದ ಶ್ರೀ ವಾಲ್ಮಿಕಿ ಜಯಂತಿ ಹಾಗೂ ಗಂಗಾ ಪರಮೇಶ್ವರಿ, ಮತ್ತು ಅಂಬಿಗಡ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದ ಗಂಗಾ ಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಆವರಣದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿ, ಗಂಗಾಪರಮೇಶ್ವರಿ, ಹಾಗೂ ಅಂಬಿಗರ ಚೌಡಯ್ಯ ರವರ ಭಾವ ಚಿತ್ರಕ್ಕೆ ಪುಷ್ವಾರ್ಚನೆ ಮಾಡುವ ಮೂಲಕ ಸಂಘದ ಅಧ್ಯಕ್ಷ ಬಸವರಾಜು ಚಾಲನೆ ನೀಡಿದರು.ಇನ್ನೂ ಜರ್ನಾಧನಸ್ವಾಮಿ ಮಾತನಾಡಿ, ವಾಲ್ಮೀಕಿ ಮಹರ್ಷಿರವರು ಹೇಗೆ ವಾಲ್ಮೀಕಿ ಮಹರ್ಷಿಯಾಗಿ ರಾಮಾಯಣ. ಮಹಾಗಂಥ್ರ ಬರೆದ ಬಗ್ಗೆ ವಿಸ್ತಾರವಾಗಿ ತಿಳಿಸಿಕೊಟ್ಟರು.ಇದಲ್ಲದೆ ರಾಮಾಯಣದ ನೀತಿ ಪಾಠವನ್ನು ನಾವೆಲ್ಲರೂ ನಮ್ಮ ಜೀವನ ಆಳವಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಗಂಗಾ ಪರಮೇಶ್ವರಿ ಮೀನುಗಾರರ ಸಹಕಾರ ಸಂಘದ ಅದ್ಯಕ್ಷ ಬಸವರಾಜು, ನರಸಯ್ಯ, ರಂಗಸ್ವಾಮಿ, ನಾರಾಯಣ , ಶ್ರೀನಿವಾಸ್ ಹಾಗೂ ಸದಸ್ಯರುಗಳು ಹಾಜರಿದ್ದರು

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment