ಪರಿಸರ ಕಾಳಜಿ ಮೂಡಿಸುತ್ತಿರುವ ಮಾದನ ಹಿಪ್ಪರಗಾ ಯುವಕರು..!

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದ ಯುವಕರು ಪರಿಸರ ಕಾಳಜಿ ಮೂಡಿಸುತ್ತಾ ಗ್ರಾಮಕ್ಕೆ ಮಾದರಿಯಾಗಿದ್ದಾರೆ. ಆದ್ಯಾತ್ಮಿಕ ತಾಣವಾದ ಈ ಗ್ರಾಮವು ಭಕ್ತಿಯ ತವರೂರರಾಗಿದೆ ಶಿವಲಿಂಗೇಶ್ವರ ವಿರಕ್ತ ಮಠ ಹಾಗೂ ಶಾಂತೇಶ್ವರ ಹಿರೇಮಠ ಎಂಬ ಎರಡು ಮಠಗಳು ಇದ್ದು ಇಲ್ಲಿ ಯುವ ಸ್ವಾಮಿಜಿ ಮಠಾಧಿಶರಾಗಿದ್ದಾರೆ ಶ್ರೀ ಅಭಿನವ ಶಿವಲಿಂಗ ಸ್ವಾಮೀಜಿ ಹಾಗೂ ಶಾಂತವೀರ ಶಿವಾಚಾರ್ಯರು ಈ ಯುವಕರಿಗೆ ಸ್ಪೂರ್ತಿಯಾಗಿ ಸಾಮಾಜಿಕ ಕಾರ್ಯದಲ್ಲಿ ಯುವಕರು ಮುಂದಾಗುವಂತೆ ತಿಳಿಸಿದ್ದರು. ಇದರಿಂದ ಪ್ರೆರಣೆ ಪಡೆದ ಸುಮಾರು ನೂರಕ್ಕೂ ಹೆಚ್ಚು ಯುವಕರು ರಾಷ್ಟ್ರೀಯ ಸ್ವಂ ಸೇವ ಸಂಘವನ್ನು ಕಟ್ಟಿಕೊಂಡು ಪ್ರತಿ ಭಾನುವಾರ ಗ್ರಾಮದ ರಸ್ತೆಗಳನ್ನು ಸ್ವಚ್ಚ ಮಾಡಿ ಗಿಡ ನೆಟ್ಟು ಜನರಲ್ಲಿ ಪರಿಸರ ಉಳಿಸಿ ಬೆಳಸಿ ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗ ಇಟ್ಟುಕೊಳ್ಳಬೇಕು ಎಂದು ಸಾರ್ವಜನಿಕರಲ್ಲ ಅರಿವು ಮೂಡಿಸುತ್ತಿದ್ದಾರೆ. ಕೊರೊನಾದಿಂದಾಗಿ ಶಾಲಾ ಕಾಲೇಜುಗಳು ಕೂಡಾ ಆರಂಬವಾಗಿಲ್ಲ ಇದರಿಂದ ಯುವಕರು ದುಶ್ಚಟಗಳತ್ತ ಹೊಗುತ್ತಿದ್ದಾರೆ ಯುವಕರು ಮ¸ನಸ್ಸು ಇಂದು ಸಾಮಾಜಿಕ ಸೇವಾ ಮನೋಭಾವದಲ್ಲಿ ತೋಡಗಿಕೊಂಡರೆ ಮನಸ್ಸು ಕೂಡಾ ಸ್ವಚ್ಚವಾಗುತ್ತದೆ ಜೊತೆಗೆ ಪ್ರತಿ ಗ್ರಾಮವು ಸ್ವಚ್ಚವಾಗುತ್ತದೆ ನಮ್ಮ ಗ್ರಾಮ ನಮ್ಮ ಹೆಮ್ಮ ಎಂಬುವು ಪ್ರತಿಯಬ್ಬ ಯುವಕರು ಅರಿತು ಅವರ ಅವರ ಗ್ರಾಮ ಸ್ವಚ್ಚ ಮಾಡುವಲ್ಲಿ ಮುಂದಾದರೆ ಸುಂದರ ಪರಿಸರಯುಕ್ತ ಸಮಾಜ ನಿರ್ಮಾಣವಾಗುತ್ತಿದೆ ಎಂದು ನುಡಿಯುವ ಇಲ್ಲಿನ ಯುವಕರು ಎಲ್ಲರಗೂ ಮಾದರಿಯಾಗಿದ್ದಾರೆ.

ವರದಿ-ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ ಟಿವಿ ಆಳಂದ

Please follow and like us:

Related posts

Leave a Comment