ಕೋರ್ಟ್ ಆವರಣದಲ್ಲಿಯೇ ಅಂಧರೊಬ್ಬರ ಸಮಸ್ಯೆ ಆಲಿಸಿದ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ..!

ಮುಳಬಾಗಿಲು: ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪ್ರಧಾನ ಸಿವಿಲ್ ನ್ಯಾಯಾಧೀಶ ಹಾಜಿ ಹುಸೇನ್ ಸಾಬ್ ಯಾದವಾಡ ಅವರು, ಕೋರ್ಟ್ ಆವರಣದಲ್ಲಿದ್ದ ಅಂಧರೊಬ್ಬರ ಕಷ್ಟವನ್ನು ಖುದ್ದಾಗಿ ಆಲಿಸಿ ಮಾನವೀಯತೆ ಮೆರೆದಿದ್ದಾರೆ, ನ್ಯಾಯಾಧೀಶರು ಕೋರ್ಟ್ ಹಾಲ್ ನಲ್ಲಿ ದೂರುಗಳನ್ನು ಪರಿಶೀಲಿಸುವಾಗ, ಮುಳಬಾಗಿಲಿನ ತಾತಿಪಾಳ್ಯ ನಗರದ ನಿವಾಸಿಯಾದ ಹುಟ್ಟು ಅಂಧನಾಗಿರುವ ದೇವರಾಜಾಚಾರಿ, ಎನ್ನುವರು ತನ್ನ ಸೈಟ್ ನಲ್ಲಿ ಬೇರೆಯವರು ಜಾಗವನ್ನ ಅತಿಕ್ರಮಣ ಪ್ರವೇಶ ಮಾಡಿದ್ದು, ಈಗಾಗಿ ಉಚಿತ ಕಾನೂನು ಸೇವೆಯಲ್ಲಿ ಮುಳಬಾಗಿಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಹಾಕಿದಕ್ಕೆ ಹಿಂಬರಹ ನೀಡಿ ಎಂದು ಕೋರ್ಟ್ ಸಿಬ್ಬಂದಿಯೊಂದಿಗೆ ದೇವರಾಜಾಚಾರಿ ಕೋರ್ಟ್ ಹಾಲ್ ನ ಹೊರಗಡೆ ಕೂಗಾಡಿದ್ದಾರೆ, ಇದನ್ನ ಗಮನಿಸಿದ ನ್ಯಾಯದೀಶರು, ನೊಂದ ದೇವರಾಜಾಚಾರಿ ರೊಂದಿಗೆ ಪಕ್ಕದಲ್ಲೆ ಕುಳಿತು, ಸಮಸ್ಯೆ ಆಲಿಸಿ ದಾಖಲೆಗಳನ್ನು ಕೂಡಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು, ಈ ವೇಳೆ ನ್ಯಾಯಾಧೀಶರಿಗೆ ಧನ್ಯವಾದಗಳನ್ನು ತಿಳಿಸಿದ ದೇವರಾಜಾಚಾರಿ, ಕೋರ್ಟ್ ನಿಂದ ಹೊರ ನಡೆದರು.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Please follow and like us:

Related posts

Leave a Comment