ನಂಜನಗೂಡಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆರೋಗ್ಯ ಹಸ್ತ ಕೋರೋನ ವಾರಿಯರ್ಸ್ ಗಳಿಗೆ ಆರೋಗ್ಯ ಕವಚ ಬಾಂಡ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಹಸ್ತ ರಾಜ್ಯಾಧ್ಯಕ್ಷ ಮಾಜಿ ಸಂಸದ ಆರ್ ಧ್ರುವನಾರಾಯಣ್, ಶಾಸಕರಾದ ಡಾ ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಸೇರಿದಂತೆ ಮತ್ತಿತರ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಿಜೆಪಿ ಸರ್ಕಾರದ ವಿರುದ್ದ ಮಾಜಿ ಸಂಸದ ಆರ್ ಧ್ರುವನಾರಾಯಣ್ ಗುಡುಗಿದರು. ಮೋದಿ ಸರ್ಕಾರ ಕೊರೋನಾ ಸೊಂಕಿತರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ವಿಫಲವಾಗಿದೆ. ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ್ರು ಬೇಸಾತ್ತಿದ್ದರೆ. ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಸೋಂಕಿತರಿಗೆ ಮೂಲಭೂತ ಸೌಕರ್ಯದ ಸೌಲಭ್ಯ ಹಾಗೂ ಕವಚ ಬಾಂಡ್ ಅನ್ನು ವಿತರಿಸಲಾಗುತ್ತಲಿದೆ ಎಂದರು.
ಕೋರೋನ ವಾರಿಯರ್ಸ್ ಗಳಿಗೆ ಆರೋಗ್ಯ ಕವಚ ಬಾಂಡ್ ವಿತರಣೆ..!

Please follow and like us: