ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಕ್ಕಿದ ಹಿನ್ನೆಲೆ ಶಂಕರೇಗೌಡರಿಗೆ ಅಭಿನಂದನಾ ಕಾರ್ಯಾ..

ರೈತ ಸಂಘದ ಜಿಲ್ಲಾಧ್ಯಕ್ಷ ಬೋರಪುರ ಶಂಕರೇಗೌಡರವರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಹಿನ್ನಲೆಯಲ್ಲಿ ತಾಲ್ಲೂಕು ರೈತ ಸಂಘದ ವತಿಯಿಂದ ಶಂಕರೇಗೌಡರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಲಾಯಿತು. ಇನ್ನೂ ಕಾರ್ಯಕ್ರಮವನ್ನು ತಹಸೀಲ್ದಾರ್ ಚಂದ್ರಮೌಳಿರವರು ರೈತ ಸಂಘದ ಜಿಲ್ಲಾಧ್ಯಕ್ಷ ಬೋರಾಪುರ ಶಂಕರೇಗೌಡರವರಿಗೆ ಸನ್ಮಾನವನ್ನು ಮಾಡಿದರು. ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿ ಕೆ.ಎಂ ನಂಜುಂಡಸ್ವಾಮಿ, ಸುಂದರೇಶ್, ರುದ್ರಪ್ಪರವರು ರೈತದ್ವನಿಯಾಗಿ ನಿಂತವವರು, ಇವರು ರೈತಪರ ಹೋರಾಟ ನಡೆಸಿದ ರೀತಿಯಲ್ಲೇ ನಾವೆಲ್ಲರೂ ಸಾಗೋಣ. ಇನ್ನೂ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ರೈತರ ಪರ ಯಾವ ಸರ್ಕಾರ ನಿಂತಿಲ್ಲ, ಬಿಜೆಪಿ ಅಧಿಕಾರಕ್ಕೆ ಬರುವ ವೇಳೆ ಪ್ರಣಾಳಿಕೆಯಲ್ಲಿ ರೈತರಪರ ನಿಲ್ಲುವುದಾಗಿ ತಿಳಿಸಿ ಈಗ ರೈತವಿರೋದಿ ನೀತಿ ಕಾಯ್ದೆಗಳನ್ನು ಭೂ ಸುದಾರಣೆ ಕಾಯ್ದೆ, ಸೇರಿದಂತೆ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆಎಂದು ಆರೋಪಿಸಿದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment