ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ.!

ಪಾವಗಡ ಪಟ್ಟಣದ ಪುರಸಭೆಯ ಅಧ್ಯಕ್ಷರಾಗಿ 23ನೇ ವಾರ್ಡಿನ ರಾಮಾಂಜಿನಪ್ಪ,ಉಪಾಧ್ಯಕ್ಷರಾಗಿ 15ನೇ ವಾರ್ಡಿನ ಸುಧಾಲಕ್ಮಿ ಪ್ರಮೋದ್ ಅವಿರೋಧವಾಗಿ ಆಯ್ಕೆಯಾಗಿದ್ದರೆ. ಚುನಾವಣಾ ಅಧಿಕಾರಿಯಾಗಿ ತಹಶೀಲ್ದಾರ್ ನಾಗರಾಜ್ ಚುನಾವಣಾ ಪ್ರಕ್ರಿಯೆಗಳನ್ನು ಯಾವುದೇ ಅಹಿತಕರ ಘಟನೆಗಳು ನಡೆಯದ ರೀತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೋಲಿಸ್ ಬಂದೂಬಸ್ ಮಾಡಿ ಬೆಳಿಗ್ಗೆ 11ಗಂಟೆಯಿಂದ ಪುರಸಭೆಯ ಕಚೇರಿಯಲ್ಲಿ ನಡೆಸಲಾಯಿತು. ಇನ್ನೂ ನಾಲ್ಕು ಜನರು ರೇಸ್ ನಲ್ಲಿದ್ದು ಮೊದಲ ಹತ್ತು ತಿಂಗಳ ಅವಧಿಗೆ ರಾಮಾಂಜಿನಪ್ಪ ರವರನ್ನು ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ ಹಾಗೂ ಮಗ ಹೆಚ್.ವಿ.ವೆಂಕಟೇಶ್ರವರ ಸೂಚನೆಯಂತೆ ಆಯ್ಕೆ ಮಾಡಲಾಗಿದೆ. ಇತರೆ ಮೂರು ಜನರಿಗೆ ಹಂತಹಂತವಾಗಿ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗುವುದು ಎಂದು ಶಾಸಕ ವೆಂಕಟರಮಣಪ್ಪ ತಿಳಿಸಿದ್ದಾರೆ. ರಾಮಾಂಜಿನಪ್ಪ ಈ ಹಿಂದೆ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವವುಳ್ಳವಾರಾಗಿದ್ದು ಉತ್ತಮ ಅಧಿಕಾರ ನಿಭಾಯಿಸುವ ಸಾಮರ್ಥ್ಯ ಹೊಂದಿರುವ ವ್ಯಕ್ತಿ ಎಂದು ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್ ತಿಳಿಸಿದ್ದಾರೆ. ರಾಜೇಶ್, ರವಿ, ಸುದೇಶ್ ಬಾಬು, ಶಂಕರ್ ರೆಡ್ಡಿ, ಮಣಿ, ವೆಂಕಟರಾವಣ, ಬಾಲು, ಯುವ ಕಾಂಗ್ರೆಸ್ ಉಪಾಧ್ಯಕ್ಷ ಕಿರಣ್, ರೂಪ್ಪ ಅನಿಲ್, ತಿಮ್ಮಾಬೋವಿ, ಸ್ಟುಡೀಯೊ ಅಮರ್, ಇತರರು ಶುಭಕೋರಿದ್ದಾರೆ. ರಾಮಾಂಜಿನಪ್ಪ ಅಧ್ಯಕ್ಷರಾಗಿ ಘೋಷಣೆ ಅದ ಬಳಿಕ ಅವರ ಅಭಿಮಾನಿಗಳು ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮೂಲಕ ಅಂಬೇಡ್ಕರ್ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.

ವರದಿ: ಇಮ್ರಾನ್ ಉಲ್ಲಾ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment