ಹಾಲಿ ಶಾಸಕರು ಹಾಗೂ ವಿಧಾನ ಸಭಾಧ್ಯಕ್ಷರಾದ ರಮೇಶ್ ಕುಮಾರ್ ಚುನಾವಣೆಗೆ ಗೈರು ಹಾಜರು…!

ಶ್ರೀನಿವಾಸಪುರ: ಶ್ರೀನಿವಾಸಪುರದಲ್ಲಿ ಪುರಸಭಾ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆ ಜೆಡಿಎಸ್ ಪಕ್ಷದ ವಶವಾಗಿದೆ. 2019 ಮಾರ್ಚ್ ತಿಂಗಳಲ್ಲಿ ನಡೆದ ಪುರಸಭಾ ಸದಸ್ಯರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ 11 ಅಭ್ಯರ್ಥಿಗಳು, ಕಾಂಗ್ರೆಸ್ ಪಕ್ಷದ 8 ಅಭ್ಯರ್ಥಿಗಳು, ಹಾಗೂ ಪಕ್ಷೇತರಾಗಿ 4 ಅಭ್ಯರ್ಥಿಗಳು ಆಯ್ಕೆಯಾಗಿರುತ್ತಾರೆ, ಜಿಲ್ಲಾಧಿಕಾರಿಗಳ ಆದೇಶದಂತೆ, ತಾಲ್ಲೂಕು ದಂಡಧಿಕಾರಿಗಳ ಸಮ್ಮುಖದಲ್ಲಿ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಜೆ ಡಿ ಎಸ್ ನಾ ಎನ್.ಎಂ.ಲಲಿತಾ ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ಆಯಿಷಾ ನವಾಜ್ ರವರು ಜಯಶೀಲಾರಾಗಿದ್ದಾರೆ.ಪೊಲೀಸ್ ಬಿಗಿ ಬಂದೋ ಬಸ್ತ್ ನಲ್ಲಿ ನಡೆದ ಚುನಾವಣೆ ಶಾಂತಿಯುತವಾಗಿ ಸಾಗಿತ್ತು. ಚುನಾವಣೆಯಲ್ಲಿ ಜೆ ಡಿ ಎಸ್ ಪಕ್ಷದ 11 ಪುರಸಭಾ ಸದಸ್ಯರು ಮತ್ತು ಒಬ್ಬ ಜೆ ಡಿ ಎಸ್ ಬಂಡಾಯ ಸದಸ್ಯ ಸೇರಿ 12 ಸದಸ್ಯರು ಹಾಜರಿದ್ದರು. ಆದರೆ ಕಾಂಗ್ರೆಸ್ ಪಕ್ಷದಿಂದ 6 ಸದಸ್ಯರು, ಇಬ್ಬರು ಕಾಂಗ್ರೆಸ್ ಬಂಡಾಯ ಸದಸ್ಯರು ಸೇರಿ 8 ಸದಸ್ಯರು ಮಾತ್ರ ಹಾಜರಾಗಿರುವುದು ತೀವ್ರ ಅನುಮಾನಕ್ಕೆ ಕಾರಣವಾಗಿದೆ. ಮತ ಚಲಾವಣೆಗೆ ಹಾಜರಾಗಬೇಕಿದ್ದ ಕಾಂಗ್ರೆಸ್ ಸದಸ್ಯ ಎಂ.ಮುನಿರಾಜು, ಸರ್ದಾರ್ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸಂಜಯ್ ಸಿಂಗ್ ಸೇರಿ ಶ್ರೀನಿವಾಸಪುರ ತಾಲ್ಲೂಕಿನ ಹಾಲಿ ಶಾಸಕರು ಹಾಗೂ ವಿಧಾನ ಸಭಾಧ್ಯಕ್ಷರಾದ ಕೆ. ಆರ್. ರಮೇಶ್ ಕುಮಾರ್ ಮತ್ತು ಕೋಲಾರ ಸಂಸದ ಎಸ್.ಮುನಿಸ್ವಾಮಿ ರವರು ಸಹ ಗೈರು ಹಾಜರಾಗಿದ್ದಾರೆ. ಇನ್ನು ಈ ಕಾರಣದಿಂದ ಕಾಂಗ್ರೆಸ್ ಸೋಲನ್ನು ಅನುಭವಿಸಲು ಕಾರಣವಾಗಿದೆ ಎನ್ನಲಾಗಿದೆ.ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮಾಜಿ ಶಾಸಕರು ಹಾಗೂ ಜೆ. ಡಿ. ಎಸ್. ಜಿಲ್ಲಾಧ್ಯಕ್ಷರಾದ ಜಿ. ಕೆ. ವೆಂಕಟಶಿವಾರೆಡ್ಡಿ ರವರು ಅಭಿನಂದನೆ ತಿಳಿಸಿ ಶ್ರೀನಿವಾಸಪುರ ಪಟ್ಟಣದಲ್ಲಿ ಜೆ. ಡಿ. ಎಸ್. ಪಕ್ಷ ತನ್ನ ನಿಲುವನ್ನು ಸಾಬೀತುಪಡೆಸಿಕೊಂಡಿದೆ. ಇದು ಸರ್ವ ಸದಸ್ಯರು ನಮಗೆ ಕೊಟ್ಟಿರುವ ಒಂದು ಸದವಕಾಶ ಈ ಅವಕಾಶವನ್ನು ದುರುಪಯೋಗ ಪಡೆಸಿಕೊಳ್ಳದೆ ಇಲ್ಲ ಮೂಲಭೂತ ಸೌಲಭ್ಯಗಳನ್ನು ಬಗೆಹರಿಸಿ. ತಾಲ್ಲೂಕಿನಲ್ಲಿ ನಮ್ಮ ಪಕ್ಷದಿಂದಲೇ ಪ್ರತಿಯೊಂದು ಕಾಮಗಾರಿಯು ಅಭಿವೃದ್ಧಿಯಾಗಿವೆ. ಅದೇ ರೀತಿ ನೀವೂ ಸಹ ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಪಕ್ಷದ ಗೌರವ ಹೆಚ್ಚಿಸಬೇಕೆಂದು ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಜೆ. ಡಿ. ಎಸ್. ಮುಖಂಡರುಗಳಾದ ಮಾಜಿ ಪುರಸಭಾ ಅಧ್ಯಕ್ಷ ಶ್ರೀನಿವಾಸ್, ಮಾಜಿ ಪುರಸಭಾ ಅಧ್ಯಕ್ಷ ಬಿ. ಎಲ್. ಸೂರಿ, ಮಾಜಿ ಪುರಸಭಾ ಅಧ್ಯಕ್ಷ ಸಿ. ಎಂ. ಮುನಿಯಪ್ಪ, councilor ವೆಂಕಟರೆಡ್ಡಿ, ಷರೀಫ್,ಕಾರ್ ಬಾಬು, ಮಂಜುನಾಥ್, ಪ್ರೆಸ್ ರವಿ, ತೂಪಲ್ಲಿ ಮಧು, ಯುವ ಮುಖಂಡರುಗಳಾದ ಹೋಳೂರು ಸಂತೋಷ್, ಗೊಲ್ಲಪಲ್ಲಿ ಪ್ರಸನ್ನ, ಬಿ. ಎಲ್. ದುರ್ಗಾ, ಮತ್ತಿತರರು ಹಾಜರಿದ್ದರು

ವರದಿ- ರಾಮ್ ಚರಣ್ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Please follow and like us:

Related posts

Leave a Comment