ನಾಡಕಚೇರಿ ಸಿಬ್ಬಂಧಿಗಳು ಮಾಸ್ಕ್ ಧರಿಸದೆ ಸರ್ಕಾರದ ನಿಯಮ ಉಲ್ಲಂಘನೆ..!

ಕೊರೊನ ತಡೆಗಟ್ಟಲು ಸರ್ಕಾರದೊoದಿಗೆ ಕೈ ಜೋಡಿಸಿರುವ ಇಲಾಖೆಯಲ್ಲಿ ಒಂದಾದ ನಾಡ ಕಾರ್ಯಾಲದ ಅಧಿಕಾರಿಗಳು ಸರಕಾರದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತಿದ್ದಾರೆ. ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ನಾಡ ಕಾರ್ಯಾಲಯದಲ್ಲಿ ಯಾವುದೇ ಅಧಿಕಾರಿ ಕೂಡ ಮಾಸ್ಕ್ ಧರಿಸದೆ ಗುಂಪು ಗುಂಪಾಗಿ ಜನರೊಂದಿಗೆ ವ್ಯವಹಾರ ನಡೆಸುತ್ತಿದ್ದಾರೆ ಜೊತೆಗೆ ಕಚೇರಿಯ ಸುತ್ತೇಲ್ಲಾ ಗಿಡಗಳು ಬೆಳೆದಿದ್ದು, ಸ್ವಚ್ಛತೆಯೇ ಇಲ್ಲದಂತಾಗಿದೆ. ಇಷ್ಟೇ ಅಲ್ಲದೇ ಕಛೇರಿಯಲ್ಲಿ ಕೆಲಸ ಮಾಡುವವರಿಗೆ ಕುಡಿಯುವುದಕ್ಕೆ ನೀರು ಕೋಡ ಇಲ್ಲದೆ ಬೇಕಾ ಬಿಟ್ಟಿ ನಾಡ ಕಾರ್ಯಾಲಯದ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. ಸಂಬಂಧ ಪಟ್ಟಂತಹ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೇ ಉಡಾಫೆ ಮಾತುಗಳನ್ನಾಡುತ್ತಿದ್ದು ಇದಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ. ಒಟ್ಟಾರೆ ಸಮಾಜದಲ್ಲಿ ಕೊರೊನ ಪ್ರಜ್ಞೆ ಮೋಡಿಸುವಂತ ಅಧಿಕಾರಿಗಳೇ ಈ ರೀತಿ ಬೇಜವಾಬ್ದಾರಿ ತೋರುತ್ತಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ.

Please follow and like us:

Related posts

Leave a Comment