ಕರ್ನಾಟಕದ ಜನತೆ ಆಶೀರ್ವಾದ ಬಿಜೆಪಿಯ ಹಾಗೂ ನಮ್ಮ ಸರ್ಕಾರದ ಮೇಲಿದೆ- ಜಗದೀಶ್ ಶೆಟ್ಟರ್..!

ಹುಬ್ಬಳ್ಳಿ: ಶಿರಾ ಮತ್ತು ಆರ್.ಆರ್.ನಗರದ ಕ್ಷೇತ್ರದ ಜನ ನಮ್ಮನ್ನ ಕೈಹಿಡಿದಿದ್ದಾರೆ. ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ನಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಕರ್ನಾಟಕದ ಜನತೆ ಆಶೀರ್ವಾದ ಬಿಜೆಪಿಯ ಹಾಗೂ ನಮ್ಮ ಸರ್ಕಾರದ ಮೇಲಿದೆ. ಬಿಹಾರದ ಚುನಾವಣೆ ಸಿ ವೋಟರ್ ಸಮೀಕ್ಷೆ ಮಹಾಘಟ ಬಂಧನ ಎಂದಿತ್ತು, ಅದು ಸುಳ್ಳಾಗಿದೆ. ಬಿಹಾರದ ಜನತೆ ಮೋದಿಯವರ ಮೇಲೆ ಇರುವ ವಿಶ್ವಾವನ್ನ ವ್ಯಕ್ತಪಡಿಸಿದ್ದು, ನಿತೇಶ್ಕುಮಾರ ಅವರ ಜೊತೆ ನಾವಿದ್ದೇವೆಂದು ತೋರಿಸಿಕೊಟ್ಟಿದ್ದಾರೆ. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತಿದ್ದು, ಕಾಂಗ್ರೆಸ್ ಅಧೋಗತಿಗೆ ಹೋಗ್ತಾ ಇದೆ ಎಂದು ಕಾಂಗ್ರೆಸ್ ಪಕ್ಷದ ಆಡಳಿತದ ಬಗ್ಗೆ ಟೀಕಿಸಿದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment