ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ವಿರುದ್ದ ಅರೆಬೆತ್ತಲೆ ಪ್ರತಿಭಟನೆ.!

ಮಳವಳ್ಳಿ: ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ರವರು ಮ್ಯಾನ್ ಹ್ಯಾಂಡಲ್ ಮಾಡಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ಕ್ರಾಂತಿ ದಳ ರಾಜ್ಯಾಧ್ಯಕ್ಷ ದೊಡ್ಡ ಬೂವಳ್ಳಿ ನಾಗರಾಜುರವರು ಮಳವಳ್ಳಿ ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.ಕಳೆದ ರಾತ್ರಿ ಶಾಂತಿ ಕಾಲೇಜು ಬಳಿ ನಿಂತಿದ್ದ ವೇಳೆ ಇನ್ಸ್ ಪೆಕ್ಟರ್ ರವಿಕುಮಾರ್ ರವರು ಬಂದಿದ್ದರು.ನಾನು ಅಂಬೇಡ್ಕರ್ ಕ್ರಾಂತಿದಳ ರಾಜ್ಯಾಧ್ಯಕ್ಷ ಎಂದು ಪರಿಚಯ ಮಾಡಿಕೊಂಡರು ಸಹ ನನ್ನ ಮೇಲೆ ಮ್ಯಾನ್ ಹ್ಯಾಂಡಲ್ ಮಾಡಿದ್ದಾರೆ ಎಂದು ಆರೋಪಿಸಿದರು. ಇಂದು ಗ್ರಾಮಾಂತರ ಪೊಲೀಸ ಠಾಣೆ ಮುಂದೆ ಅರೆಬೆತ್ತಲೆಯಾಗಿ ಏಕಾಂಗಿಯಾಗಿ ಪ್ರತಿಭಟನೆಗೆ ಮುಂದಾದರು. ಈ ಸಂದರ್ಭದಲ್ಲಿ ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಮತ್ತು ಸಿಬ್ಬಂದಿಗಳ ಹಾಗೂ ದೊಡ್ಡ ಬೂವಳ್ಳಿ ನಾಗರಾಜು ನಡುವೆ ಮಾತಿನ ಚಕಮುಕಿ ನಡೆಯಿತು. ಈ ವೇಳೆ ಪ್ರತಿಭಟನಾಕಾರ ದೊಡ್ಡಬೂವಳ್ಳಿ ನಾಗರಾಜು ಅಧಿಕ ರಕ್ತದೊತ್ತಡದಿಂದ. ಪ್ರತಿಭಟನಾ ಸ್ಥಳದಲ್ಲೇ ಕುಸಿದು ಬಿದ್ದರು. ಬಳಿಕ ಚೇತರಿಕೆಗೊಂಡ ನಂತರ ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಮಹೇಶ್ ಹಾಗೂ ಪುರಸಭೆ ಸದಸ್ಯ ವಡ್ಡರಹಳ್ಳಿ ಸಿದ್ದರಾಜು ಸೇರಿದಂತೆ ಅನೇಕ ದಲಿತಮುಖಂಡರು ಮನವೊಲಿಸಿ ಬಳಿಕ ಪ್ರತಿಭಟನೆಯನ್ನು ಕೈ ಬಿಟ್ಟರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment