ಅನಿಮೇಶನ್ ಲ್ಲಿ ತಯಾರುಗುತ್ತಿದೆ ಹುಬ್ಬಳ್ಳಿಯವ! ಕನ್ನಡ ಚಿತ್ರ”..!

ಹುಬ್ಬಳ್ಳಿ: ನಾರ್ಥ್ ಕರ್ನಾಟಕ ಮೋಷನ್ ಪಿಕ್ಟರ್ ಸಂಸ್ಥೆಯಡಿಯಲ್ಲಿ, ಅನಿಮೇಶನ್ ನಲ್ಲಿ ‘ಹುಬ್ಬಳ್ಳಿಯವ’ ಎಂಬಾ ಕನ್ನಡ ಚಲನಚಿತ್ರ ನಿರ್ಮಾಣ ಮಾಡುತ್ತಿದ್ದು ಕನ್ನಡ ಸಿನೆಮಾಗಿಂತ ವಿಭಿನ್ನವಾಗಿ ಮೂಡಿ ಬರಲಿದೆ ಎಂದು ಚಿತ್ರದ ನಿರ್ಮಾಪಕ ಬಾಬಾ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲೆ ವಿಭಿನ್ನವಾಗಿ ಚಿತ್ರ ನಿರ್ಮಾಣ ಮಾಡಲಾಗುತ್ತಿದೆ. ಹಾಲಿವುಡ್ ಚಿತ್ರ ಅವತಾರ್ ಸಿನಿಮಾದ ರೀತಿಯಲ್ಲಿ ಚಿತ್ರ ನಿರ್ಮಿಸಲು ಸಿದ್ದತೆ ನಡೆಸುತ್ತಿದೆ. ಇನ್ನೂ ಈ ಚಿತ್ರ ಹಿಂದಿ , ಮರಾಠಿ ತುಳು, ತೆಲುಗು ಭಾಷೆಗಳಿಗೂ ಡಬ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಉರಿಪೂಜೆ “ ವಾಲ್ ” ಚಿತ್ರದ ಶೈಲಿಯಲ್ಲಿ ಸಂಪೂರ್ಣ ಚಿತ್ರ ಮೂಡನ್ ಕ್ಯಾಸ್ಟರ್ ಟಿಲಡಿಯಲ್ಲಿ ಮೂಡಿ ಬರಲಿದೆ ಎಂದರು.ಚಿತ್ರದಲ್ಲಿ ನೈಲು ಪಾತ್ರಗಳೊಂದಿಗೆ ಎನಿಮೇಶನ್ ಪಾತ್ರಗಳೂ ಸಹ ಜೊತೆಯಾಗಿ ಮೂಡಿ ಬರಲಿವೆ. ಕನ್ನಡದ ಚಿತ್ರಗಳಲ್ಲಿ ಗ್ರಾಫಿಕ್ಸ್ ಶಾಟ್‌ಗಳನ್ನು ಉಪಯೋಗಿಸುವುದು ವಿಶೇಷ. ಈ ಚಿತ್ರವು ಕಾಲ್ಪನಿಕ ಹಾಗೂ ಮನರಂಜನಾತ್ಮಕವಾಗಿರುತ್ತದೆ. 400 ವರ್ಷಗಳ ಹಿಂದಿನ ಜನ ಜೀವನ ಪದ್ಧತಿಯ ಸ್ಥಿತಿಗತಿಗಳೊಂದಿಗೆ ಈ ಚಿತ್ರದಲ್ಲಿ ದೃಶ್ಯಾವಳಿಗಳನ್ನು ಅಳವಡಿಸಲಾಗುತ್ತಿದೆ. ಈ ಚಿತ್ರಕ್ಕೆ ಹಾಲಿವುಡ್ ,ಬಾಲಿವುಡ್ ಸಿನೆಮಾಗಳಲ್ಲಿ ಕೆಲಸ ಮಾಡಿದ ನುರಿತ ಗ್ರಾಫಿಕ್ಸ್ ತಂತ್ರಜ್ಞರನ್ನು ಇತರ ರಾಷ್ಟ್ರಗಳಲ್ಲಿರುವ ಅನುಭವಸ್ಥರು ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment