ಕೌನ್ ಬನೇಗಾ ಕರೋಡ್ಪತಿಯಲ್ಲಿ 1 ಕೋಟಿ ಗೆದ್ದ ಮಹಿಳೆ..!

ಕೌನ್ ಬನೇಗಾ ಕರೋಡ್ಪತಿ ಸೀಸನ್-12ರ ಬುಧವಾರದ ಸಂಚಿಕೆಯಲ್ಲಿ ಮಹಿಳೆಯೊಬ್ಬರು 1 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದಾರೆ. ದೆಹಲಿಯ ನಾಜಿಯಾ ನಸೀಮ್, ಈ ಆವೃತ್ತಿಯಲ್ಲಿ ಕೋಟಿ ರೂಪಾಯಿ ಬಹುಮಾನ ಗೆದ್ದ ಮೊದಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಎಲ್ಲಾ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದ ನಾಜಿಯಾಗೆ, ಕಾರ್ಯಕ್ರಮದ ಹೋಸ್ಟ್ ಅಮಿತಾಬ್ ಬಚ್ಚನ್ ಸ್ಟ್ಯಾಂಡಿಂಗ್ ಓವೇಷನ್ ನೀಡಿದ್ರು. ನಾಜಿಯಾ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್ನಲ್ಲಿ ವಿದ್ಯಾಭ್ಯಾಸ ಮಾಡಿ, ಸದ್ಯ ಉದ್ಯೋಗದಲ್ಲಿದ್ದಾರೆ. ಇವರಿಗೆ 9 ವರ್ಷದ ಒಬ್ಬ ಮಗನಿದ್ದಾನೆ. ಮಂಗಳವಾರದ ಸಂಚಿಕೆಯಲ್ಲಿ ನಾಜಿಯಾ 40 ಸಾವಿರ ರೂಪಾಯಿ ಗೆದ್ದಿದ್ದರು. 11ನೇ ಪ್ರಶ್ನೆವರೆಗೆ ಅವರು ಯಾವುದೇ ಲೈಫ್ಲೈನ್ ಬಳಸಿರಲಿಲ್ಲ. ಮಲಾಲಾ ಯೂಸಫ್ಝಾಯ್ ಜೀವನಾಧಾರಿತ ಸಿನಿಮಾ ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಲು ಅವರು ಹೆಚ್ಚಿನ ಸಮಯ ತೆಗೆದುಕೊಂಡಿದ್ದು ಬಿಟ್ಟರೆ, ಬೇರೆ ಎಲ್ಲಾ ಪ್ರಶ್ನೆಗಳಿಗೆ ಪಟಪಟನೆ ಉತ್ತರ ನೀಡಿದ್ರು.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment