ಮಳವಳ್ಳಿಯ ಯುವಕರಿಂದ ಮಂಗನಿಗೆ ಪುಣ್ಯಾರಾಧನೆ..!

ಮಳವಳ್ಳಿ: ಮಂಗನಿಂದ ಮಾನವ ಮಾತು ಸುಳ್ಳಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಸತ್ತ ಮಂಗನಿಗೆ ಮುಕ್ತಿ ನೀಡುವುದಕ್ಕೆ ಪುಣ್ಯಾರಾಧನೆ ಕಾರ್ಯಕ್ರಮ ಮಾಡುವ ಮೂಲಕ ಯುವಕರ ಗುಂಪೊಂದು ಮುಂದಾಗಿದೆ.ಮಳವಳ್ಳಿ ಪಟ್ಟಣದ ಎನ್ ಇ ಎಸ್ ಬಡಾವಣೆಯ ಆದರ್ಶ ಕಾನ್ವೆಂಟ್ ರಸ್ತೆಯಲ್ಲಿರುವ ಬಸವೇಶ್ವರ ವೃತ್ತದಲ್ಲಿ ಕಳೆದ ನವೆಂಬರ್ 2ರಂದು ಮಂಗವೊಂದು ಸಾವನ್ನಪ್ಪಿತ್ತು.ಇದರ ಹಿನ್ನೆಲೆಯಲ್ಲಿ ಮಂಗನಿಗೆ ಮುಕ್ತಿ ಕೊಡಿಸುವ ಉದ್ದೇಶದಿಂದ ಮಂಗನಿಗೆ ಅಂತ್ಯ ಸಂಸ್ಕಾರ ಮಾಡಿ ಅದಕ್ಕೆ ಗೋರಿಯನ್ನು ಕಟ್ಟಿ ಪೂಜೆಯನ್ನು ನೇರೆವೆರಿಸಲಾಯಿತು. ಹನುಮಂತನಿಗೆ ಪ್ರಿಯವಾದ ಕಡ್ಲೆಕಾಯಿ, ಹೋಳಿಗೆಯನ್ನು ಮಾಡಿ ನೈವೇದ್ಯ ಮಾಡಿ ಭಕ್ತರಿಗೆಲ್ಲಾ ಸಿಹಿ ಹಂಚಲಾಯಿತು.ಇನ್ನೂ ಈ ಕಾರ್ಯಕ್ರಮದಲ್ಲಿ ಪುರಸಭೆ ಸ್ಥಾಯಿಸಮಿತಿ ಮಾಜಿ ಅಧ್ಯಕ್ಷ ಶಿವಕುಮಾರ, ಪುರಸಭೆ ಮಾಜಿ ಸದಸ್ಯ ನಾಗೇಶ್, ಕಾಂಗ್ರೇಸ್ ಮಹಿಳಾ ಅಧ್ಯಕ್ಷ ಜಯಮ್ಮ, ನಾಗರತ್ನ, ಭರತ್, ವಿಜಯಗೌಡ , ಚೇತನ, ಸಂಜಯ್ ,ವಿನಯ್ ಸೇರಿದಂತೆ ಮತ್ತಿತ್ತರರು ಭಾಗಿಯಾಗಿದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment