ರಾಜ್ಯ ಸರ್ಕಾರದಿಂದ ಹಸಿರು ಪಟಾಕಿ ಮಾರಟಕ್ಕೆ ಇಂದಿನಿಂದ ಲೈಸೆಂನ್ಸ್ ..!

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ರೋಗಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣದಿಂದಾಗಿ ಪಟಾಕಿಯನ್ನು ನಿಷೇಧಿಸಿತ್ತು. ಆದ್ರೇ ಹಸಿರು ಪಟಾಕಿ ಹೊಡೆದು, ದೀಪಾವಳಿ ಹಬ್ಬ ಆಚರಣೆಗೆ ಅನುಮತಿಸಿತ್ತು. ಇಂತಹ ಹಸಿರು ಪಟಾಕಿ ಮಾರಾಟಕ್ಕೆ ಇಂದಿನಿಂದ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಸಿರು ಪಟಾಕಿ ಮಾರಾಟ ಹಾಗೂ ಮಾರಾಟಕ್ಕೆ ಲೈಸೆನ್ಸ್ ಪಡೆಯೋದಕ್ಕೆ ಇಂದಿನಿಂದ ಆರಂಭವಾಗಲಿದೆ.ಈ ಕುರಿತಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಹಸಿರು ಪಟಾಕಿ ಮಾರಾಟಕ್ಕೆ ಲೈಸೆನ್ಸ್ ಆರಂಭವಾಗಿದೆ. ಹಸಿರು ಪಟಾಕಿಯನ್ನಷ್ಟೇ ಮಾರಾಟ ಮಾಡಬೇಕು. 5 ದಿನ ಪಟಾಕಿ ಮಾರಾಟಕ್ಕೆ ಮಾತ್ರವೇ ಅವಕಾಶ ನೀಡಲಾಗಿದೆ ಎಂಬುದಾಗಿ ಆದೇಶದಲ್ಲಿ ತಿಳಿಸಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment