ಭದ್ರತಾ ರಹಿತ ಸಾಲನೀಡುವಂತೆ ಒತ್ತಾಯಿಸಿ ಪ್ರತಿಭಟನೆ..!

ಮಳವಳ್ಳಿ: ಕೃಷಿ ಕೂಲಿಕಾರರು ಮತ್ತು ಬಡ ರೈತರಿಗೆ ಕೇಂದ್ರ ಸರ್ಕಾರದ ಆರ ಬಿಐ ನೀತಿಯಡಿ 1ಲಕ್ಷ ರೂವರೆಗೆ ಭದ್ರತಾ ರಹಿತ ಸಾಲ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಮಳವಳ್ಳಿ ತಾಲ್ಲೂಕಿನ ತಳಗವಾದಿ ಕೆನರಾ ಬ್ಯಾಂಕ್ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು. ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ತಳಗವಾದಿ ವಲಯ ಸಮಿತಿ ಅಧ್ಯಕ್ಷ ರಾಮಣ್ಣ ನೇತೃತ್ವದಲ್ಲಿ ನೂರಾರು ಕೃಷಿ ಕೂಲಿಕಾರರು ಕೆನರಾ ಬ್ಯಾಂಕ್ ವಿರುದ್ದ ಘೋಷಣೆ ಕೂಗಿದರು. ಇನ್ನೂ ಕೃಷಿ ಕೂಲಿಕಾರರ ಸಂಘ ವಲಯ ಕಾರ್ಯದರ್ಶಿ ಎನ್ .ಶಿವಕುಮಾರ ಮಾತನಾಡಿ, ಕೇಂದ್ರ ಸರ್ಕಾರಬಡತನ ಹೋಗಲಾಡಿಸಿ ಸುಸ್ಥಿರ ಬದುಕು ನಡೆಸಲು ವಿಶೇಷವಾಗಿ ಬಡರೈತರು, ಕೃಷಿಕೂಲಿಕಾರರು ಇತರೆ ಅಸಂಘಟಿತ ಕಾರ್ಮಿಕರಿಗೆ ಸಾಲ ಕೊಡುವ ಯೋಜನೆ ಇದ್ದರೂ ಸಹ ತಳಗವಾದಿ ಕೆನರಾಬ್ಯಾಂಕ್ ನವರು ಪ್ರತಿದಿನ ಸಾಲಕ್ಕಾಗಿ ವರ್ಷಾನುಗಟ್ಟಲೆ ಅಲೆದರೂ ಸಾಲ ಕೊಡಲು ನಿರಾಕರಿಸುತ್ತಿರುವುದನ್ನು ಕೃಷಿ ಕೂಲಿಕಾರರ ಸಂಘ ಖಂಡಿಸುತ್ತದೆ ಎಂದರು. ಇನ್ನೂ ಶಾಖಾ ವ್ಯವಸ್ಥಾಪಕ ಉಮೇಶ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಪುಟ್ಟಮಾದು, ಮರಿಯಪ್ಪ, ಹನುಮಂತು, ಆನಂದ್, ಸೇರಿದಂತೆ ಮತ್ತಿತ್ತರರು ಇದ್ದರು

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment