ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗಳಿಗೆ ಎರಡು ಲಾರಿಗಳು ಡಿಕ್ಕಿ..!

ಪಾವಗಡ: ಪಾವಗಡ ಪಟ್ಟಣದ ಹೊರವಲಯದಲ್ಲಿ ಬೆಳಗಿನ ಜಾವ ಸುಮಾರು 3 ಗಂಟೆ ಸಮಯದಲ್ಲಿ ಭತ್ತ ತುಂಬಿಕೊಂಡು ಕಲ್ಯಾಣ ದುರ್ಗದ ಕಡೆಯಿಂದ ಬರುತ್ತಿದ್ದ ಲಾರಿ ರಸ್ತೆ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅದೇ ರಸ್ತೆಯಲ್ಲಿ ತುಮಕೂರು ಕಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಣಿವೆ ನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಡಿವೈಡರ್ ಗೆ ಡಿಕ್ಕಿ ಹೊಡೆದು, ರಸ್ತೆಯ ಮಧ್ಯದಲ್ಲಿರುವ ಕಬ್ಬಿಣದ ಡ್ರಿಲ್ ಜಖಂಗೊಂಡಿದೆ.ಬೆಳಗ್ಗೆಯಿಂದ ಎಲ್ಲೇಡೆ ಮಳೆ ಬರುತ್ತಿದ್ದು, ರಸ್ತೆ ಸರಿಯಾಗಿ ಕಾಣದೆ ಇದ್ದಿದ್ದರಿಂದ ಈ ಅವಘಡ ಸಂಭಕ್ಕೆ ಕಾರಣ ಎನ್ನಲಾಗುತ್ತಲಿದೆ. ಇನ್ನೂ ಇಬ್ಬರೂ ಲಾರಿ ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನೂ ಸ್ಥಳೀಯರು ಅದೀಕಾರಿಗಳು ಅಪಘಾತ ತಡೆಯಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಪ್ರತಿ ದಿನ ಅಪಘಾತಗಳು ಸಂಭವಿಸುತ್ತಲೇ ಇರುತ್ತದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

Please follow and like us:

Related posts

Leave a Comment