ವಿಧಾನಸಭೆಗೆ ನನ್ನ ಪ್ರವೇಶ ತಡೆಯಲು ಯಾರಿಂದಲೂ ಸಾದ್ಯವಿಲ್ಲ- ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ..!

ನಾಗಮಂಗಲ: ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಜಯಗಳಿಸುವ ಮೂಲಕ ವಿಧಾನಸಭೆಗೆ ನನ್ನ ಪ್ರವೇಶವನ್ನು ತಡೆಯಲು ಯಾರಿಂದಲೂ ಸಾದ್ಯವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ವಿರೋದಿಗಳಿಗೆ ಪಂಥಾಹ್ವಾನ ನೀಡಿದರು. ಪಟ್ಟಣದ ತಮ್ಮ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ಶಾಸಕ ಸುರೇಶ್ಗೌಡ ಮತ್ತು ಮಾಜಿ ಶಾಸಕ ಚೆಲುವರಾಯಸ್ವಾಮಿ ಇಬ್ಬರು ನನಗೆ ರಾಜಕೀಯವಾಗಿ ಸಮಾನ ವಿರೋಧಿಗಳು. ಕೆಲವೇ ದಿನಗಳಲ್ಲಿ ಎದುರಾಗುವ ಗ್ರಾಮ ಪಂಚಾಯ್ತಿ ಚುನಾವಣೆಯಿಂದಲೇ ನಾನು ತಾಲೂಕಿನ ಸಕ್ರಿಯ ರಾಜಕಾರಣಕ್ಕೆ ತೊಡಗಿಸಿಕೊಳ್ಳುತ್ತೇನೆ.ನನ್ನದು ಅಪ್ಪಟ ಜೆಡಿಎಸ್. ತಾಲೂಕಿನಲ್ಲಿ ನನ್ನದೇ ಆದ ಪಡೆ ಇದೆ. ನನ್ನ ಪಡೆಗೆ ನನ್ನ ಬೆಂಬಲ. ಈ ಹಿಂದಿನ ರಾಜಕೀಯ ಒಡಂಬಡಿಕೆ ಮುಂದೆ ಮರುಕಳಿಸುವುದಿಲ್ಲ. ನನ್ನಿಂದ ಸಹಾಯ ಪಡೆದ ಶಾಸಕರಿಂದ ನಮಗೆ ಗೌರವವಿಲ್ಲ. ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತ, ಗೆಲುವಿನ ಮೂಲಕ ವಿಧಾನಸಭೆ ಪ್ರವೇಶಿಸುವುದು ನೂರಕ್ಕೆ ನೂರರಷ್ಟು ಸತ್ಯ ಎಂದರು.

ವರದಿ-ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment