ಮೀನುಪಶುವಾರು ಹಕ್ಕು 2 ವರ್ಷಬಾಕಿಯಿದ್ದರು ನವೀಕರಣದ ಹಣ ಸ್ವೀಕರಿಸಲು ಗ್ರಾಮಪಂಚಾಯಿತಿ ಹಿಂದೇಟು..!

ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಕೆ. ಆರ್ ನಗರ ತಾಲ್ಲೂಕಿನ ಹೊಸೂರು ಗ್ರಾಮದ ರಂಗಸ್ವಾಮಿ ಬಿನ್ ಕೃಷ್ಣೇಗೌಡರವರು ಪಿರಿಯಾಪಟ್ಟಣ ತಾಲೂಕಿನ ಕಿತ್ತೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿನ ದೊಡ್ಡಕೆರೆಯ ಮೀನುಪಶುವಾರು ಹಕ್ಕನ್ನು ದಿನಾಂಕ:14-11-2017 ರಂದು ಐದು ವರ್ಷಗಳ ಅವಧಿಗೆ ಬಹಿರಂಗ ಹರಾಜ್ ಇಸ್ತಿಹಾರ್ ನಲ್ಲಿ ಭಾಗವಹಿಸಿ ಮೀನು ಪಶುವಾರು ಹಕ್ಕನ್ನು ಪಡೆದಿದ್ದಾರೆ. ಅದರಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಾನೂನಾತ್ಮಕವಾಗಿ ರಂಗಸ್ವಾಮಿ ಯವರಿಗೆ ದೊಡ್ಡ ಕೆರೆಯ ಹಕ್ಕನ್ನು 5 ವರ್ಷದವರೆಗೆ ನೀಡಲಾಗಿತ್ತ. ಅದರ ಪ್ರಕಾರ ರಂಗಸ್ವಾಮಿಯವರು ಗ್ರಾಮ ಪಂಚಾಯಿತಿಗೆ ಪ್ರತಿವರ್ಷವೂ ನವೀಕರಣದ ಮೊತ್ತವನ್ನು ತಪ್ಪದೇ ಅವಧಿಗೆ ಮುನ್ನ ಕಟ್ಟುತ್ತಿದ್ದರು. ಈಗಾಗಲೇ 3 ವರ್ಷದ ಹಣವನ್ನು ಪಂಚಾಯಿತಿಗೆ ಪಾವತಿಸಲಾಗಿದ್ದು, ಈ ವರ್ಷದ ಹಣವನ್ನು ಪಾವತಿಸಲು ಪಂಚಾಯಿತಿಗೆ ಹೋದಾಗ ಪಂಚಾಯಿತಿ ಅಧಿಕಾರಿಗಳು ಹಣವನ್ನು ಸ್ವೀಕರಿಸುತ್ತಿಲ್ಲ. 5 ವರ್ಷದ ಅವಧಿಯವರೆಗೆ ಕೆರೆಯ ಮೀನುಪಶುವಾರು ಹಕ್ಕನ್ನು ಕಾನೂನಾತ್ಮಕವಾಗಿ, ನನಗೆ ಬಿಟ್ಟುಕೊಟ್ಟಿದ್ದರೂ, ಬೇರೆಯವರಿಗೆ ಕೆರೆಯನ್ನು ನೀಡಲು ಪಂಚಾಯಿತಿ ಅಧಿಕಾರಿಗಳು ಹುನ್ನಾರ ನಡೆಸಿದ್ದು, ಹಣವನ್ನು ಸ್ವೀಕರಿಸದೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ ಎಂದು ರಂಗಸ್ವಾಮಿ ಆರೋಪಿಸಿದ್ದು, ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.

ವರದಿ- ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Please follow and like us:

Related posts

Leave a Comment