ಸಾಲಭಾದೆಯಿಂದ ರೈತರು ಸರಣಿ ಆತ್ಮಹತ್ಯೆ- ಬಿ.ಡಿ.ಪಾಟೀಲ್..!

ಇಂಡಿ: ಬರದ ನಾಡೇ ಎಂದು ಕೆಟ್ಟ ಹಣೆ ಪಟ್ಟಿಕಟ್ಟಿಕೊಂಡ ಇಂಡಿ ತಾಲ್ಲೂಕು ಇಂದು ಸರಕಾರದ ನಿರ್ಲಕ್ಷದಿಂದ ರೈತರ ಸರಣಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾರ್ವಜಿನಿಕ ಸರಕಾರಿ ಆಸ್ಪತ್ರೆಯಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಿ.ಡಿ.ಪಾಟೀಲ್ ಮಾತಾನಾಡಿ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಮಳಸಿದ್ದ ಮಲ್ಲೇಶಿ ಚಾಳಿಕಾರ ವಯಸ್ಸು (35) ಸಾಲಭಾದೆಯಿಂದ ಕೀಟನಾಶಕ ವಿಷ ಸೇವೆನೆ ಮಾಡಿ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ ಸರಕಾರಿ ಬ್ಯಾಂಕ್ ನಲ್ಲಿ 3 ಲಕ್ಷ ಮತ್ತು ಊರ ಮನೆಯ ಸಾಲವಾಗಿ 5 ಲಕ್ಷಕ್ಕಿಂತ ಹೆಚ್ಚಿನ ಹಣ ಪಡೆದು ಸಾಲದ ಕಿರುಕುಳ ತಾಳದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇತ್ತಿಚಿಗೆ ತಾಲೂಕಿನ ತಡವಲಗಾ, ಲಿಂಗದಳ್ಳಿ ಗ್ರಾಮ ಮತ್ತು ಇತರೆ ಗ್ರಾಮಗಳಲ್ಲಿ ರೈತ ಆತ್ಮಹತ್ಯೆ ಹೆಚ್ಚಾಗುತ್ತಿದೆ. ಕೂಡಲೇ ಸರಕಾರ ನೊಂದ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ ಇಂತಹ ಅಚಾತುರ್ಯ ಆಗದಂತೆ ನೋಡಿಕೊಳ್ಳಬೇಕು ಎಂದು ಸರಕಾರಕ್ಕೆ ಒತ್ತಾಯ ಮಾಡಿದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ..

Please follow and like us:

Related posts

Leave a Comment