ಚಿನ್ನಾಭರಣ ಕಿತ್ತುಕೊಂಡ ಆರೋಪ ಇನ್ಸ್ ಪೆಕ್ಟರ್ ಮೇಲೆಯೇ ಎಫ್ ಐ ಆರ್ ದಾಖಲು..!

ಹುಬ್ಬಳ್ಳಿ; ನವ ನಗರದ ನಿವೃತ್ತ ನೌಕರರೋರ್ವರಿಗೆ ಜೀವ ಭಯ ಹುಟ್ಟಿಸಿ ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣವನ್ನ ಕಿತ್ತುಕೊಂಡ ಬಗ್ಗೆ ಎಪಿಎಂಸಿ ಠಾಣೆಯಲ್ಲೇ ಅಲ್ಲಿನ ಇನ್ಸಪೆಕ್ಟರ್ ಮೇಲೆ ಪ್ರಕರಣ ದಾಖಲಾಗಿದೆ. ನವ ನಗರದ ನಿವಾಸಿ ಓಂಕಾರಗೌಡ ಪಾಟೀಲ ಎಂಬುವವರದ್ದೇ ಚಿನ್ನಾಭರಣವನ್ನ ಕಿತ್ತುಕೊಂಡು ಹೋಗಲಾಗಿದೆ ಎಂದು ದೂರು ದಾಖಲಾಗಿದೆ. ಈ ಪ್ರಕರಣದಲ್ಲಿ ಹಾಲಿ ಎಪಿಎಂಸಿ ಇನ್ಸಪೆಕ್ಟರ್ ಪ್ರಭು ಸೂರಿನ್ ಮೂರನೇಯ ಆರೋಪಿಯಾಗಿದ್ದು, ಬೆಂಗಳೂರಿನ ಶಿವಲೀಲಾ ಪಾಟೀಲ್ ಹಾಗೂ ಸಂತೋಷಕುಮಾರ ಗುಡ್ಡಾಪುರಮಠ ಮೊದಲ ಹಾಗೂ ಎರಡನೇಯ ಆರೋಪಿಯಾಗಿದ್ದಾರೆ.ಚಿನ್ನಾಭರಣ ಕಿತ್ತುಕೊಂಡ ಬಗ್ಗೆ ಪದೇ ಪದೇ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೂ ಪ್ರಕರಣವನ್ನ ದಾಖಲಿಸಿಕೊಂಡಿಲ್ಲ. ಹೀಗಾಗಿ ಓಂಕಾರಗೌಡ ಪಾಟೀಲ, 3ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ದೂರು ನೀಡಿದ್ದರು.ಈ ಬಗ್ಗೆ ನ್ಯಾಯಾಲಯ ದೂರು ದಾಖಲಿಸಿಕೊಳ್ಳುವಂತೆ ತಿಳಿಸಿದ್ದರಿಂದ ಇನ್ಸಪೆಕ್ಟರ್ ಪ್ರಭು ಸೂರಿನ್ ಸೇರಿದಂತೆ ಮೂವರ ವಿರುದ್ಧ ಪಿಎಸ್ಐ ಎಸ್.ಎಸ್.ಜಕ್ಕನಗೌಡ ದೂರು ದಾಖಲಿಸಿಕೊಂಡಿದ್ದಾರೆ. ಅದೇ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅದೇ ಠಾಣೆಯಲ್ಲಿ ಇನ್ಸಪೆಕ್ಟರ್ ಇರುವುದರಿಂದ ತನಿಖೆ ಯಾವ ರೀತಿ ನಡೆಯುತ್ತೆ ಎನ್ನುವ ಕುತೂಹಲ ಮೂಡಿದೆ.

ವರದಿ- ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment