ಆಕ್ರಮವಾಗಿ ಮರಾಕಾಸ್ತ್ರ ಹೊಂದಿರುವ ಆರೋಪದಲ್ಲಿ ಹುಬ್ಬಳ್ಳಿಯ ಸೆಟ್ಲಮೆಂಟ್ ಏರಿಯಾ ಜನ..!

ಹುಬ್ಬಳ್ಳಿ: ಅಕ್ರಮವಾಗಿ ಮಾರಕಾಸ್ತ್ರಗಳನ್ನು ಹೊಂದಿದ್ದರೆಂಬಾ ಆರೋಪದಲ್ಲಿ ಸೆಟ್ಲಮೆಂಟ್ ಏರಿಯಾ ಜನ ಹಾಗೂ ಇನ್ನುಳಿದ ಪ್ರದೇಶಗಳಲ್ಲಿ ಹಲವರನ್ನು ತಡರಾತ್ರಿಯವರೆಗೂ ವಿಚಾರಣೆ ಮಾಡಿರುವ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಠಾಣೆಯಲ್ಲಿ ನಡೆದಿದೆ. ಸೆಟ್ಲಮೆಂಟಿನ ಶ್ಯಾಮ ಜಾಧವ ಸಹೋದರ ರವಿ ಜಾಧವ, ಶ್ರೀನಿವಾಸ ವೀರಾಪುರ ಹಾಗೂ ಬೇಪಾರಿ ಎಂಬುವವರನ್ನ ವಿಚಾರಣೆ ಮಾಡಿದ್ದು, ಕೆಲವರ ಮನೆಯಲ್ಲಿ ತಲ್ವಾರ ಮತ್ತು ಕೊಡಲಿಗಳು ಸಿಕ್ಕಿರುವುದು ಖಚಿತವಾದ ಹಿನ್ನೆಲೆಯಲ್ಲಿ ಠಾಣೆಗೆ ಕರೆಸಲಾಗಿತ್ತು. ಬೆಂಡಿಗೇರಿ ಠಾಣೆಯಲ್ಲಿ ಸ್ವತಃ ಡಿಸಿಪಿ ಪಿ.ಕೃಷ್ಣಕಾಂತ ಆಗಮಿಸಿ ಆಯುಧ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿ ವಿಚಾರಣೆ ಮಾಡಿದ್ರು. ಈ ಸಮಯದಲ್ಲಿ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಅಕ್ರಮವಾಗಿ ಸಂಗ್ರಹಿಸಿಟ್ಟ ಮಾರಕಾಸ್ತ್ರಗಳ ಬಗ್ಗೆ ಮಾಹಿತಿ ನೀಡುವಂತೆಯೂ ತಾಕೀತು ಮಾಡಿದ್ದು, ರಾತ್ರೋರಾತ್ರಿ ನಡೆದ ಈ ಕಾರ್ಯಾಚರಣೆ ಸೆಟ್ಲಮೆಂಟ್ ಪ್ರದೇಶದಲ್ಲಿನ ಕೆಲವರಿಗೆ ನಡುಕ ಹುಟ್ಟಿಸಿತ್ತು. ಪೊಲೀಸರ ಕಣ್ಣು ತಪ್ಪಿಸಿ, ಕಾನೂನು ಬಾಹಿರ ಚಟುವಟಿಕೆ ಮಾಡಿದ್ರೇ ಪೊಲೀಸರು ಸುಮ್ಮನಿರಲ್ಲ ಎಂಬ ಎಚ್ಚರಿಕೆಯನ್ನ ಡಿಸಿಪಿ ಪಿ.ಕೃಷ್ಣಕಾಂತ ನೀಡಿದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment