ಮಸ್ಕೀ ತಾಲೂಕನ್ನು ಗುಡಿಸಲು ರಹಿತ ತಾಲೂಕಾಗಿ ಮಾಡುತ್ತೇವೆ-ಸಚಿವ ವಿ.ಸೋಮಣ್ಣ..!

ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಭ್ರಮರಾಂಭ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸಚಿವ ವಿ.ಸೋಮಣ್ಣ ಮಾತನಾಡಿ ರೈತರ ಹಿತ ದೃಷ್ಟಿಯಿಂದ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ, . ಪ್ರತಾಪ್ ಗೌಡರ ದೂರದೃಷ್ಟಿಯ ಚಿಂತನೆಯನ್ನು ನೀವು ಗಮನಿಸಿ, ಹಾಗೂ ಮಸ್ಕಿ ತಾಲೂಕನ್ನು ರಾಜ್ಯದ ಮೊದಲ ಅಭಿವೃದ್ಧಿ ತಾಲೂಕು ಆಗಿ ಮಾಡಲಾಗುತ್ತದೆ, ಇದೆಲ್ಲದರ ಜೊತೆಗೆ ದೇವದುರ್ಗಕ್ಕೆ 40ಸಾವಿರ ಮನೆಗಳನ್ನು ಕೂಡ ಕಟ್ಟಿಕೊಟ್ಟಿದ್ದೇವೆ. ಮಸ್ಕೀ ತಾಲೂಕನ್ನು ಗುಡಿಸಲು ರಹಿತ ತಾಲೂಕಾಗಿ ಮಾಡಲು ನಾವು ನಿರ್ಧರಿಸಿದ್ದೇವೆ ಆಗಾಗಿ ಮಸ್ಕಿತಾಲೂಕಿಗೆ ಸುಮಾರು ಒಂದು ಸಾವಿರ ಮನೆಗಳು ಹಾಗೂ 200ಕೋಟಿ ರೂಪಾಯಿ ವಿವಿಧ ಕಾಮಗಾರಿಗಳಿಗೆ ಹಣವನ್ನು ಬೀಡುಗಡೆ ಮಾಡಲಾಗುತ್ತದೆ. ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಮಸ್ಕಿ

Please follow and like us:

Related posts

Leave a Comment