ಭತ್ತ ಖರೀದಿ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿ ರಾಜ್ಯ ಸರ್ಕಾರದ ವಿರುದ್ಧ ರೈತರಿಂದ ಪ್ರತಿಭಟನೆ..!

ಸಿಂಧನೂರು: ಪ್ರಗತಿಪರ ರೈತ ಹೋರಾಟ ಸಮಿತಿ ನಗರ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ನೇತೃತ್ವದಲ್ಲಿ ಭತ್ತಕ್ಕೆ ಖರೀದಿ ಕೆಂದ್ರ ಪ್ರಾರಂಭಕ್ಕಾಗಿ . ರೈತರು ಬೆಳೆದ ಭತ್ತಕ್ಕೆ ಹಾಗೂ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವ ಜೊತೆಗೆ ಬೇಸಿಗೆ ಬೆಳೆಗಳಿಗೆ ನೀರುಣಿಸಲು ಐಸಿಸಿ ಸಭೆ ಕರೆಯಲು ಒತ್ತಾಯಿಸಿ ನಗರದ ಎಪಿಎಂಸಿ ಯಲ್ಲಿ ಇರುವ ಗಣೇಶ ದೇವಸ್ಥಾನದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ಬೀದಿಗಿಳಿದು ತಹಶಿಲ್ದಾರ ಕಚೇರಿ ರವರೆಗೆ ಪ್ರತಿಭಟನೆ ಮಾಡಿದರು.ಈ ಮೆರವಣಿಗೆ ಉದ್ದಕ್ಕೂ ಕೆಂದ್ರ.ರಾಜ್ಯ ಸರ್ಕಾರ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ರವರ ವಿರುದ್ಧ ಘೋಷಣೆ ಕುಗ್ಗಿದರು.ಇನ್ನೂ ಗಾಂಧಿ ವೃತ್ತದಲ್ಲಿ ರೈತರು ದಿಢೀರ್ ರಸ್ತಾ ರೋಕೋ ಮಾಡಿ ಕೆಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ದಿಢೀರ್ ರಸ್ತಾ ರೋಕೋ ದಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಉದ್ಭವವಾಗಿತ್ತು, ಈ ದಿಢೀರ್ ಪ್ರತಿಭಟನೆಯಿಂದ ಪ್ರಯಾಣಿಕರು ಪರದಾಡುತ್ತಿದ್ದರೂ ಸಂಚಾರಕ್ಕೆ ಅನುಕೂಲ ಕಲ್ಪಿಸುವಲ್ಲಿ ಪೊಲೀಸರು
ವಿಫಲವಾದರು .

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪದರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment