ಶೀಘ್ರವೇ ಭತ್ತ ಖರೀದಿ ಕೇಂದ್ರ ತೆರೆಯುವಂತೆ ರೈತ ಸಂಘದ ಅಧ್ಯಕ್ಷರಿಂದ ಒತ್ತಾಯ..!

ಈಗಾಗಲೇ ಭತ್ತ ಕಟಾವಿಗೆ ಬಂದಿದೆ. ತಕ್ಷಣವೇ ಭತ್ತ ಖರೀದಿ ಕೇಂದ್ರ ತೆರೆದು, ರೈತರಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮಾಡಬೇಕು ಎಂದು ಕರ್ನಾಟಕ ಪ್ರಾಂತ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಎಲ್.ಭರತ್ ರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಳವಳ್ಳಿ ಪಟ್ಟಣದ ಕರ್ನಾಟಕ ಪ್ರಾಂತ ರೈತ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ ಅತಿ ಹೆಚ್ಚು ಭತ್ತ ಬೆಳೆಯುವ ಜಿಲ್ಲೆಗಳಲ್ಲಿ ನಮ್ಮ ಜಿಲ್ಲೆಯು ಸಹ ಒಂದಾಗಿದ್ದು, ಭತ್ತ ಖರೀದಿಯಲ್ಲಿ ವಿಳಂಬ ಮಾಡಿದ್ದರೆ ರೈತರು ಸಾಲದ ಸುಳಿಗೆ ಸಿಲುಕಲಿದ್ದಾರೆ. ಕೂಡಲೇ ಖರೀದಿ ಕೇಂದ್ರ ತೆರೆದು, ಸೂಕ್ತ ಬೆಲೆಯನ್ನು ಖರೀದಿ ಮಾಡಿದ ತಕ್ಷಣವೇ ಹಣ ಪಾವತಿಗೆ ಕ್ರಮ ತೆಗೆದುಕೊಳ್ಳಬೇಕು. ಆ ಮೂಲಕ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು. ಒಂದು ಎಕರೆಗೆ ಕೇವಲ 16 ಕ್ವೀಂಟಲ್ ಮಾತ್ರ ಖರೀದಿ ಹಾಗೂ ಒಬ್ಬ ರೈತನಿಂದ ಗರಿಷ್ಠ 40 ಕ್ವಿಂಟಾಲ್ ಮಾತ್ರ ಖರೀದಿ ಮಾಡುವ ಮಾನದಂಡ ರೈತ ವಿರೋಧಿಯಾಗಿದ್ದು, ಹೀಗಾಗಿ ಎಕರೆಗೆ 25 ಕ್ವಿಂಟಾಲ್ ಹಾಗೂ 100 ಕ್ವಿಂಟಾಲ್ ಭತ್ತ ಖರೀದಿ ಮತ್ತು ಕನಿಷ್ಠ ಕ್ವಿಂಟಾಲ್ ಭತ್ತಕ್ಕೆ 2500 ರೂ.ಗಳನ್ನ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 26ರಂದು ಹಲವು ಸಂಘಟನೆಗಳು ಕೇಂದ್ರ ಸರ್ಕಾರದ ರೈತ ಕಾರ್ಮಿಕರು ದಲಿತ ಮಹಿಳಾ, ವಿದ್ಯಾರ್ಥಿ ವಿರೋಧಿ ನೀತಿಗಳು ವಿರುದ್ದ ಕರೆ ನೀಡಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ನಮ್ಮ ಸಂಘಟನೆ ಬೆಂಬಲಿಸಲಿದೆ ಎಂದರು.ಕೋಟೆ ಚಿಕ್ಕಮೊಗಣ್ಣ, ಪೇಟೆ ಶಿವಣ್ಣ, ಶಾಂತರಾಜು, ಕರಿಯಪ್ಪ, ಎಂ.ಮಹಾದೇವು, ಶಿವಲಿಂಗ, ಆರ್.ಜಯಕುಮಾರ್

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment