ಹಡಪದ ಸಮಾಜಕ್ಕೂ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಸಿ-ಅಪ್ಪಣ್ಣ ಸ್ವಾಮಿಗಳು.. !

ಹುಬ್ಬಳ್ಳಿ: ಹಡಪದ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಹಡಪದ ಸಮಾಜದ ಅಪ್ಪಣ್ಣ ಸ್ವಾಮಿಗಳು ಸರ್ಕಾರಕ್ಕೆ ಒತ್ತಾಯ ಮಾಡಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಡಪದ ಸಮುದಾಯದ ಮುಖಂಡರು 2017 ರಲ್ಲೇ ನಮ್ಮ ಸಮಾವೇಶದಲ್ಲಿ ಭಾಗಿಯಾಗಿದ್ದ ಸಿಎಂ ಯಡಿಯೂರಪ್ಪ, ಸರ್ಕಾರ ರಚನೆಯಾದರೆ 24 ಗಂಟೆಯಲ್ಲೇ ನಿಗಮ ಸ್ಥಾಪನೆ ಮಾಡುತ್ತೇವೆ ಅಂತ ಹೇಳಿದ್ದರು.ಆದರೀಗ ಎಲ್ಲ ಸಮುದಾಯಗಳಿಗೆ ನಿಗಮಗಳನ್ನ ಸ್ಥಾಪನೆ ಮಾಡುತ್ತಿದ್ದು ನಮ್ಮ ಸಮುದಾಯಕ್ಕೂ ನೀಡಲಿ ಅಂತ ಅಪ್ಪಣ್ಣ ದೇವರ ಸಂಸ್ಥಾನ ಮಠದ ಶ್ರೀ ಅನ್ನದಾನಿ ಭಾರತಿ ಮಹಾಸ್ವಾಮಿಗಳು ಮನವಿ ಮಾಡಿದರು.ನಮ್ಮ ಸಮುದಾಯಕ್ಕೆ ನಿಗಮದ ಜೊತೆಗೆ ಪ್ರವರ್ಗ 1 ಕ್ಕೆ ಸೇರಿಸಬೇಕು ಅಂತ ಈ ವೇಳೆ ಸರ್ಕಾರಕ್ಕೆ ಒತ್ತಾಯಿಸಿದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment