ಗೂಡ್ಸ್ ಚಾಲಕನ ಮೇಲೆ ಹಲ್ಲೆ-ಹಣ ಮೋಬೈಲ್ ಫೋನ್ ಕಸಿದು ಪರಾರಿಯಾದ ದುಷ್ಕರ್ಮಿಗಳು..!

ಮಳವಳ್ಳಿ: ಬೈಕ್ ವೊಂದರಲ್ಲಿ ಮೂವರು ದುಷ್ಕರ್ಮಿಗಳ ಗುಂಪು ಬಂದು ಗೂಡ್ಸ್ ವಾಹನ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಿ, ಚಾಲಕ ಬಳಿ ಇದ್ದಂತಹ ಹಣ ಹಾಗೂ ಮೊಬೈಲ್ ಕಸಿದುಕೊಂಡ ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಶಿರಮಹಳ್ಳಿ ರಸ್ತೆಯಲ್ಲಿ ನಡೆದಿದೆ. ದ್ಯಾವಪಟ್ಟಣದಿಂದ ಎಲೆಕೋಸನ್ನು ಅಶೋಕ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ತುಂಬಿಕೊಂಡು ಮಂಡ್ಯಕ್ಕೆ ಸಾಗುತ್ತಿದ್ದಾಗ. ಬೈಕ್ ವೊಂದರಲ್ಲಿ ಮೂವರು ಬಂದು ಗಾಡಿ ಅಡ್ಡ ಹಾಕಿ ಹಲ್ಲೆ ನಡೆಸಿ 4 ಸಾವಿರ ನಗದು ಸೇರಿದಂತೆ ಮೊಬೈಲ್ ಫೋನ್ ಕಸಿದುಕೊಂಡ ಪರಾರಿಯಾಗಿದ್ದಾರೆ. ಚಾಲಕ ಆದರ್ಶನಿಗೆ ಸಣ್ಣ ಪುಟ್ಟಗಾಯಗಳಾಗಿದ್ದು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದದ್ದು, ಸ್ಥಳಕ್ಕೆ ಗ್ರಾಮಾಂತರ ಸಬ್ ಇನ್ಸ್ ಪೆಕ್ಟರ್ ರವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ..

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment