ಬಡ ರೈತನ ಜೀವನ ಕಸಿದುಕೊಳ್ಳುತ್ತಿರುವ ಅಧಿಕಾರಿಗಳು..!

ಲಿಂಗಸೂಗೂರು: ಆ ಬಡ ರೈತ 30 ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಉಳುಮೆ ಮಾಡುತ್ತಾ ಬಂದಿದ್ದಾನೆ.ಇದೀಗ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏಕಾ ಏಕಿ ರೈತ ಉಳುಮೆ ಮಾಡುವ ಜಮೀನಿನಲ್ಲಿ ಕಸ ವಿಲೇವಾರಿ ಘಟಕ ಕಾಮಗಾರಿ ಕಾರ್ಯ ಆರಂಭಿಸಿದ್ದಾರೆ. ಇದರಿಂದಾಗಿ ಬಡ ರೈತ ಕಂಗಾಲಾಗಿದ್ದಾನೆ.ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ನರಕಲದಿನ್ನಿ ಗ್ರಾ.ಪಂ.ಒಂದಲ್ಲಾ ಒಂದು ಸುದ್ದಿಗೆ ಹೆಸರು ವಾಸಿಯಾಗಿರುವ ಪಂಚಾಯತಿ. ಇಲ್ಲಿನ ಅಧಿಕಾರಿಗಳು ಮಾಡುವ ಕಾರ್ಯಕ್ಕೆ ಜನರು ರೋಷಿ ಹೋಗಿದ್ದಾರೆ. ನರಕಲದಿನ್ನಿ ಪಂ.ವ್ಯಾಪ್ತಿಗೆ ಬರುವ ರಾಂಪೂರ ಗ್ರಾಮದಲ್ಲಿ ಕಂದಾಯ ಇಲಾಖೆಗೆ ಸೇರಿದ ಜಮೀನಿನಲ್ಲಿ ನಾರಾಯಣಪ್ಪ ಕಳೆದ 40 ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ. ತಾನು ಉಳುಮೆ ಮಾಡುವ ಸರ್ಕಾರಿ ಜಮೀನಿಗೆ ನಾರಾಯಣಪ್ಪ ವರ್ಷಕ್ಕೆ ಕಂದಾಯ ಇಲಾಖೆಗೆ 460 ರೂ.ಕಟ್ಟಿದ್ದಾರೆ.ಆದರೆ ಗ್ರಾ.ಪಂ.ಪಿಡಿಒ ಮತ್ತು ಬಿಲ್ ಕಲೆಕ್ಟರ್ ಸೇರಿ ರೈತ ಉಳುಮೆ ಮಾಡುವ ಜಮೀನಿನಲ್ಲಿ ಸ್ವಚ್ಚ ಭಾರತ್ ಮಿಶನ್ ಯೋಜನೆ ಅಡಿಯಲ್ಲಿ ಕಸ ವಿಲೇವಾರಿ ಘಟಕ ಕಾಮಗಾರಿಯನ್ನು ಆರಂಭಿಸಿದ್ದಾರೆ.ರಾಂಪೂರ ಗ್ರಾಮದಲ್ಲಿ ಉಳುಮೆ ಮಾಡುವ ಸ್ಥಳವನ್ನು ಬಿಟ್ಟು ಬೇರೆ ಕಡೆ ಕಸ ವಿಲೇವಾರಿ ಘಟಕವನ್ನು ಸರ್ಕಾರಿ ಜಮೀನಿನಲ್ಲಿ ಮಾಡದೇ ನೇರವಾಗಿ ರೈತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಸಾಗುವಳಿದಾರರು ಪಿಡಿಒ ಮಹ್ಮದ ಖಾಜಾ ಹುಸೇನ್ ಹಾಗೂ ಬಿಲ್ ಕಲೆಕ್ಟರ್ ಅಮರೇಶ್ ವಿರುದ್ಧ ಕಿಡಿ ಕಾರಿದ್ದಾರೆ. ಇನ್ನು ರೈತರು ಸಾಗುವಳಿ ಮಾಡುವ ಜಮೀನನ್ನು ಬಿಟ್ಟು ಬೇರೆ ಕಡೆ ಕಸ ವಿಲೇವಾರಿ ಘಟಕವನ್ನು ಮಾಡಬೇಕು.ಇಲ್ಲವಾದಲ್ಲಿ ಗ್ರಾ.ಪಂ.ಅಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡುವ ಹೆಚ್ಚರಿಕೆ ನೀಡಿ,ಸಹಾಯಕ ಆಯುಕ್ತರಿಗೆ,ತಹಶಿಲ್ದಾರರಿಗೆ ಹಾಗೂ ತಾ.ಪಂ.ಇಒಗೆ ಮನವಿ ಸಲ್ಲಿಸಿದ್ದಾರೆ.

ವರದಿ-ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment