ನಾನು ದೆಹಲಿಗೆ ಹೋಗಿದ್ದು ಖಾಸಗಿ ಕಾರಣಕ್ಕೆ- ಬಿ.ವೈ. ವಿಜಯೇಂದ್ರ‌ ಹೇಳಿಕೆ.!

ಬೆಂಗಳೂರುಃ ತಾವು ದೆಹಲಿಗೆ ತೆರಳಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ಹೇಳಿಕೆ ಕೊಟ್ಟಿದ್ದಾರೆ. ನಾನು ದೆಹಲಿಗೆ ಹೋಗಿದ್ದು ಖಾಸಗಿ ಕಾರಣಕ್ಕೆ. ರಾಜಕಾರಣದ ವಿಚಾರಕ್ಕಾಗಿ ದೆಹಲಿಗೆ ಹೋಗಿರಲಿಲ್ಲ. ವೈಯಕ್ತಿಕ ಕಾರ್ಯದ ನಿಮಿತ್ತ ಹೋಗಿದ್ದೆ. ಬೇರೆ ನಾಯಕರನ್ನು ಭೇಟಿ ಮಾಡಲು ಹೋಗಿರಲಿಲ್ಲ.ಮರಾಠ ನಿಗಮವನ್ನು ಭಾಷಾಧಾರಿತವಾಗಿ ಮಾಡಿಲ್ಲ. ಮರಾಠಿಗರು ಕರ್ನಾಟಕದಲ್ಲಿ ಬಹಳ ವರ್ಷಗಳಿಂದ ವಾಸವಿದ್ದಾರೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸವನ್ನು ಬಿಜೆಪಿ ಮಾಡ್ತಿದೆ. ಇದರಲ್ಲಿ ಯಾವುದೇ ತಪ್ಪು ಕಲ್ಪನೆಗಳು ಬೇಡ. ನನಗೆ ಬಸವಕಲ್ಯಾಣ ಕಡೆ ಓಡಾಡಲು ರಾಜ್ಯಾಧ್ಯಕ್ಷರು ಸೂಚಿಸಿದ್ದಾರೆ. ನಾನು ಮತ್ತು ಭಗವಂತ ಖೂಬಾ ಬಸವಕಲ್ಯಾಣ ದಲ್ಲಿ ಕೆಲಸ ಮಾಡ್ತೇವೆ ಎಂದಿದ್ದಾರೆ. ಇನ್ನು ಸಂಪುಟ ವಿಸ್ತರಣೆ ವಿಳಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಕುರಿತು ರಾಷ್ಟ್ರೀಯ ಅಧ್ಯಕ್ಷರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ವರಿಷ್ಠರು ಯಾವಾಗ ನಿರ್ಧಾರ ಮಾಡ್ತಾರೋ ನೋಡಬೇಕು. ವರಿಷ್ಠರ ನಿರ್ಧಾರ ಹೊರಬಿದ್ದಾಗ ಮುಖ್ಯಮಂತ್ರಿಗಳು ವಿಸ್ತರಣೆ ಮಾಡ್ತಾರೆ ಎಂದಿದ್ದಾರೆ.

Please follow and like us:

Related posts

Leave a Comment