ಕಸವೀಲೇವಾರಿ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು- ಸಾರ್ವಜನಿಕರಿಗೆ ತಪ್ಪದ ತಲೆನೋವು ..!

ಸಿರವಾರ: ದಿನಪೂರ್ತಿ ಉಲ್ಲಾಸ ಉತ್ಸಾಹದಿಂದ ದಿನಕಳೆಯಲು ಕೆಲಸಮಾಡಲು ಮುಖ್ಯವಾಗಿ ಬೇಕಾಗಿರುವುದು ದೇಹಕ್ಕೆ ವ್ಯಾಯಾಮ , ಹಾಗೂ ತುಸು ದೂರದ ಜಾಗಿಂಗ್. ದೇಹದ ಆರೋಗ್ಯ ಮಟ್ಟ ಕಾಪಾಡಿಕೊಳ್ಳಲು ಕೂಡ ಡಾಕ್ಟರ್ ಕೂಡ ಹೇಳುವುದು ಇದನ್ನೇ .ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳ ಬೇಕು ಅಂತ ಬೆಳಿಗ್ಗೆ ಜಾಗಿಂಗ್ ಹೊರಟರೆ ಮಾತ್ರ ಖಾಯಿಲೆ ಬೀಳುವುದು ಖಚಿತ ಯಾಕಂದ್ರೆ ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನಲ್ಲಿ ಮುಖ್ಯ ರಸ್ತೆಯ ಪಕ್ಕದಲ್ಲಿ ತಾಲ್ಲೂಕಿನ ಘನ ತ್ಯಾಜ್ಯ , ಪ್ಲಾಸ್ಟಿಕ್, ಸತ್ತ ಪ್ರಾಣಿಗಳು, ಕೋಳಿ ಪುಕ್ಕಗಳು,ಎಲ್ಲವನ್ನು ತಂದು ಜನರು ರಸ್ತೆ ಬದಿಗೆ ಎಸೆಯುತ್ತಾರೆ, ಇದನ್ನು ತಿನ್ನಲು ಬೀದಿ ನಾಯಿಗಳು ರಸ್ತೆ ಬದಿಗೆ ಬರುವುದರಿಂದ ಅಪಘಾತಗಳೂ ಕೂಡ ಆಗಾಗ ಸಂಭವಿಸುತ್ತಲೇ ಇರುತ್ತದೆ. ಜೊತೆಗೆ ರಸ್ತೆ ಪಕ್ಕಾದಲ್ಲೆ ಖಾಸಗಿ ಶಾಲೆಯಿದ್ದು, ಪಟ್ಟಣ ಪಂಚಾಯಿತಿಗೆ ಕಸ ವಿಲೇವಾರಿ ಬಗ್ಗೆ ಎಷ್ಟು ದೂರು ನೀಡಿದರು ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ವಂತೆ.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Please follow and like us:

Related posts

Leave a Comment