ರಮೇಶ್ ಜಾರಕಿಹೋಳಿಯನ್ನು ಹೊಗಳಿದ; ಡಿಸಿಎಂ..!

ಮೂಡಲಗಿ: ಮೂಡಲಗಿ ತಾಲೂಕಿನ ಅರಭಾವಿ ಪಟ್ಟಣದ ಸರಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದ ನೂತನ ಸಂಕೀರ್ಣವನ್ನು ಉದ್ಘಾಟನೆ ಹಾಗೂ ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್ ಗೋಕಾಕ್ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ರಾಜ್ಯದ ನೀರಾವರಿ ಕ್ಷೇತ್ರದಲ್ಲಿ ಉತ್ತಮ ಕೆಲಸವನ್ನು ಮಾಡುವ ಮೂಲಕ ನೀರಾವರಿ ಕ್ಷೇತ್ರದ ಅಭಿವೃದ್ಧಿಗೆ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಅವರನ್ನು ಹಾಡಿ ಹೊಗಳಿದ್ದಾರೆ. ಇನ್ನೂ ಗೋಕಾಕ್ ಪದವಿ ಕಾಲೇಜಿಗೆ ಇವರೆಗೂ ಶಾಶ್ವತ ನೆಲೆ ಇಲ್ಲ, ಸುಮಾರು 50 ರಿಂದ 60 ಕಾಲೇಜುಗಳಿಗೆ ಈವರೆಗೂ ಸ್ವಂತ ಕಟ್ಟಡವಿಲ್ಲ. ಮೊದಲು ಸ್ವಂತ ಜಮೀನನ್ನು ಗುರುತು ಮಾಡುವ ಮುಖಾಂತರ ಕೂಡಲೇ ಸರಕಾರ ಕ್ರಮ ಕೈಗೊಳ್ಳಲಿದೆ. ಈಗಾಗಲೆ ಸ್ವಇಚ್ಛೆಯಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕೆ ಆಫ್ಲೈನ್ ಕ್ಲಾಸ್ ಶುರು ಮಾಡಿದ್ದೇವೆ. ಕಾಲೇಜು ಆರಂಭಕ್ಕೆ ವಿದ್ಯಾರ್ಥಿಗಳು, ಪೋಷಕರ ಒತ್ತಾಯ ಇತ್ತು ಹೀಗಾಗಿ ಸದ್ಯಕ್ಕೆ ಆನ್ಲೈನ್, ಆಫ್ಲೈನ್ ಕ್ಲಾಸ್ ಎರಡೂ ಆರಂಭಿಸಿದ್ದೇವೆ ಎಂದರು.

Please follow and like us:

Related posts

Leave a Comment