ಹಕ್ಕಿ ಪಿಕ್ಕಿ ಜನಾಂಗಕ್ಕೂ ಸಾಗುವಳಿ ಭೂಮಿ ಮಂಜೂರು- ಸುರೇಶ್ ಗೌಡ..!

ನಾಗಮಂಗಲ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಶಿಕಾರಿಪುರ ಗ್ರಾಮದಲ್ಲಿ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಜಮೀನು ಸಾಗುವಳಿ ಬಗ್ಗೆ ಉಂಟಾಗಿರುವ ವಿವಾದ ಕುರಿತು ಅಧಿಕಾರಿಗಳ ವರದಿಗೆ ಶಾಸಕ ಸುರೇಶ್ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡಿಸೆಬರ್ 1 ರಿಂದಲೇ ಜಂಟಿ ಸರ್ವೆ ನಡೆಸಿ ಅರ್ಹ ಭೂ ರಹಿತರಿಗೆ ಭೂ ಮಂಜೂರಾತಿಗೆ ಕ್ರಮವಹಿಸುವಂತೆ ಶಾಸಕ ಸುರೇಶ್ ಗೌಡ ತಾಕೀತು ಮಾಡಿದರು. ನಾಗಮಂಗಲ ಮಿನಿವಿಧಾನಸೌಧ ಸಭಾಂಗಣದಲ್ಲಿ ಶಾಸಕ ಸುರೇಶ್ ಗೌಡ ಅಧ್ಯಕ್ಷತೆಯಲ್ಲಿ ಇಂದು ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಸಭೆ ನಡೆಯಿತು.ಸಭೆಯಲ್ಲಿ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಕಿರಣ್ ಮಾತನಾಡಿ 2016ರಲ್ಲಿ ಭೂ ಮಂಜೂರಾತಿ ಕೋರಿ ಒಟ್ಟು 110 ಅರ್ಜಿಗಳಿದ್ದು, ಸ.ನಂ.58 ರಲ್ಲಿ 99 ಎಕರೆ ಭೂಮಿ ಅತಿಕ್ರಮವಾಗಿದೆ ಎಂದು ಮಾಹಿತಿ ನೀಡಿದರು. ಶಿಕಾರಿಪುರದ ಪಕ್ಕಿ ಪಿಕ್ಕಿ ಜನಾಂಗದ 52 ಕುಟುಂಬಗಳಿಗೆ ಮಾತ್ರ 72 ಎಕರೆ ಭೂಮಿ ಮಂಜೂರು ಮಾಡಲಾಗಿದ್ದು, ಉಳಿದ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಮತ್ತೊಮ್ಮೆ ಸಮಿತಿ ಸಭೆ ನಡೆಸಿ ಬಾಕಿ ಅರ್ಜಿ ಪುರಸ್ಕರಿಸುವ ಮೂಲಕ ಭೂ ಮಂಜೂರಾತಿಗೆ ಅವಕಾಶವಿದೆ ಎಂದರು.ಜೊತೆಗೆ ಶಾಸಕ ಸುರೇಶ್ ಗೌಡ ಗ್ರಾಮ ಪಂಚಾಯ್ತಿ ಪಿಡಿಓ ಬಸವಶೆಟ್ಟಿ, ಗ್ರಾಮಲೆಕ್ಕಾಧಿಕಾರಿ ಅನಿಲ್ ರವರನ್ನು ತರಾಟೆಗೆ ತೆಗೆದುಕೊಂಡರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment