ಮಾಲೂರಿನಲ್ಲಿ ನಟ ಅಭಿಷೇಕ್ ಅಂಬರೀಶ್ ಗೆ ಭರ್ಜರಿ ಸ್ವಾಗತ..!

ಮಾಲೂರು: ತಾಲ್ಲೂಕಿನ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ನಟ ಅಭಿಷೇಕ್ ಅಂಬರೀಶ್ ಅವರನ್ನು ಅವರ ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡ್ರು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸಂಪಂಗೇರೆ ಗ್ರಾಮಕ್ಕೆ ಖಾಸಗಿ ಕಾರ್ಯಕ್ರಮ ನಿಮಿತ್ತ ತಡರಾತ್ರಿ ಆಗಮಿಸಿದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅವರನ್ನು ಸಾವಿರಾರು ಅಭಿಮಾನಿಗಳು ಭರ್ಜರಿಯಾಗಿ ಸ್ವಾಗತಿಸಿದರು, ತಡರಾತ್ರಿಯಾದ್ರು ಅಭಿಷೇಕ್ ನನ್ನು ನೋಡಲು ಸಾವಿರಾರು ಅಭಿಮಾನಿಗಳು ಆಗಮಿಸಿದರು. ಇನ್ನೂ ಅಭಿಷೇಕ್ ಅವರಿಗೆ ಹೂಮಾಲೆ ಹಾಕಲು ಅಭಿಮಾನಿಗಳಲ್ಲಿ ನುಕ್ಕುನುಗ್ಗಲು ಉಂಟಾಯಿತು, ಇನ್ನೂ ನಟ ಅಭಿಷೇಕ್ ಗೆ ಮಾಲೂರು ಮಾಜಿ ಶಾಸಕ ಮಂಜುನಾಥ್ ಗೌಡ ಸಾಥ್ ನೀಡಿದ್ರು. ಮಾಲೂರು ಮಾಜಿ ಶಾಸಕ ಮಂಜುನಾಥ ಗೌಡರ ರಾಜಕೀಯದ ಬಗ್ಗೆ ಮಾತನಾಡಿದ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಮಂಜುನಾಥ ಗೌಡ ರವರು ಮುಂದಿನ ದಿನಗಳಲ್ಲಿ ಜನಪ್ರತಿನಿಧಿಯಾಗಿ ಆಯ್ಕೆಯಾಗಿ ವಿಧಾನಸೌಧಕ್ಕೆ ಹೋಗುವುದು ನಮ್ಮ ಕುಟುಂಬದ ಆಸೆಯಾಗಿದೆ ಎಂದು ತಿಳಿಸಿದರು.

ವರದಿ: ಮಾರುತೇಶ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಮಾಲೂರು

Please follow and like us:

Related posts

Leave a Comment