ನಾಗಮಂಗಲದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆ..!

ನಾಗಮಂಗಲ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ 71 ನೇ ಸಂವಿಧಾನ ಸಮರ್ಪಣಾ ದಿನವನ್ನು ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ತಾಲ್ಲೂಕು ದಲಿತ ಸಮುದಾಯದ ಮುಖಂಡರು, ತಾಲ್ಲೂಕು ಕಚೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಸ್ವಚ್ಚಗೊಳಿಸಿ, ತಹಸೀಲ್ದಾರ್ ಕುಂಞ ಅಹಮ್ಮದ್ ನೇತೃತ್ವದಲ್ಲಿ ಮಾಲಾರ್ಪಣೆ ನೆರವೇರಿಸಿದರು.ನಂತರ ಮಾತನಾಡಿದ ತಹಸೀಲ್ದಾರ್, ಈ ದೇಶ ಕಂಡ ವಿಶ್ವ ಮಾನವ ಅಂಬೇಡ್ಕರ್ ತತ್ವಾದರ್ಶಗಳು ಪ್ರಾತಃ ಸ್ಮರಣೀಯ. ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಎಂಬ ಸಂವಿಧಾನ ಸರ್ವಜನಾಂಗದ ಪವಿತ್ರ ಗ್ರಂಥ.ಇಂತಹ ಪವಿತ್ರ ಗ್ರಂಥದ ಕರಡು ಪ್ರತಿ ಪ್ರಜಾಪ್ರಭುತ್ವ ವ್ಯವಸ್ಥೆಯ ಅಂದಿನ ಸರ್ಕಾರಕ್ಕೆ ಸಮರ್ಪಣೆಯಾದ ದಿನ ನಿಜಕ್ಕೂ ಈ ದೇಶದ ಪ್ರತಿಯೊಬ್ಬರ ಪಾಲಿನ ಸುದಿನ ಎಂದರು.

Please follow and like us:

Related posts

Leave a Comment