ಮತ-ಜಾತಿ, ಪಂಗಡ, ಭಾಷೆ, ಸಂಸ್ಕೃತಿ, ಸೌಹಾರ್ದತೆಯ ನೆಲೆವೀಡು ನಮ್ಮ ಶ್ರೇಷ್ಠ ಭಾರತ- ಕೆಂಪರಾಜು..!

ಪಿರಿಯಾಪಟ್ಟಣ: ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತಾ ಸಪ್ತಾಹ ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ನ್ಯಾಯಾಧೀಶ ಕೆಂಪರಾಜು ಅವರು ಮಾತನಾಡಿದರು. ಭಾರತ ಜಗತ್ತಿನಲ್ಲೇ ಬೃಹತ್ ಲಿಖಿತ ಸಂವಿಧಾನ ಹೊಂದಿದ್ದು, ತನ್ನದೇ ವೈಶಿಷ್ಟವನ್ನು ಒಳಗೊಂಡಿದೆ. ಕಾನೂನಿನ ಚೌಕಟ್ಟಿನೊಳಗೆ ಎಲ್ಲರೂ ಸಮಾನರು, ದೇಶದ ಪ್ರತಿ ನಾಗರಿಕನೂ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಹೊಂದಿರಬೇಕು ಹಾಗೂ ಸಮರ್ಪಣಾ ಭಾವದಿಂದ ನಾವೆಲ್ಲರೂ ದೇಶಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದರು. ಇನ್ನೂ ಹೆಚ್ಚುವರಿ ನ್ಯಾಯಾಧೀಶೆ ಬಿ.ಡಿ ರೋಹಿಣಿ ಮಾತನಾಡಿ, ಮಹಿಳೆಯರಿಗೂ ಸಮಾಜದಲ್ಲಿ ಸಮಾನ ಹಕ್ಕುಗಳಿವೆ ಇದನ್ನು ಅರಿತುಕೊಂಡು ಬದುಕು ನಡೆಸಬೇಕು ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಜೆ.ಎಸ್ ನಾಗರಾಜು, ಆರಕ್ಷಕ ಉಪನಿರೀಕ್ಷಕ ಮಹೇಶ್ ಕುಮಾರ್, ವಕೀಲರಾದ ಹರೀಶ್ , ಚಂದ್ರಶೇಖರ್, ಪಿಡಿಒ ದಿವಾಕರ್ , ಉಪ ತಹಸಿಲ್ದಾರ್ ಶಶಿಧರ್, ಉಪ ನೋಂದಣಾಧಿಕಾರಿ ಕೃಷ್ಣಪ್ಪ ,ವಿವಿಧ ಇಲಾಖೆಗಳ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರು ಹಾಜರಿದ್ದರು .

ವರದಿ-ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Please follow and like us:

Related posts

Leave a Comment