ಬೈಕ್ ಕಳ್ಳನ ಬಂಧನ- 4.40 ಲಕ್ಷ ಮೌಲ್ಯದ 11 ಬೈಕ್ ವಶ..!

ನಂಜನಗೂಡು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ ನಡೆಸಿ ಬೈಕ್ ಕಳ್ಳನನ್ನು ಬಂಧಿಸಿದ್ದಾರೆ. ಬಂಧಿತನಿಂದ 4.40 ಲಕ್ಷ ಮೌಲ್ಯದ 11 ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ. ಚಾಮರಾಜನಗರದ ಅಬ್ದುಲ್ ಖಲೀಲ್ ಪಾಷಾ ಬಂಧಿತ ಆರೋಪಿ. ನವೆಂಬರ್ 21 ರಂದು ಎಸ್ಸೈ ಚಂದ್ರು ರವರು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ನಂಜನಗೂಡಿನ ಬಳಿ ಈತ ಕಳವು ಮಾಡಿದ್ದ ವಾಹನ ಸಮೇತ ಸಿಕ್ಕಿಬಿದ್ದಿದ್ದ. ವಿಚಾರಣೆಗೆ ಒಳಪಡಿಸಿದಾಗ 11 ಬೈಕ್ ಗಳನ್ನು ಕಳ್ಳತನ ಮಾಡಿರೋದು ಗೊತ್ತಾಗಿದೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment