ಸಂಪುಟ ವಿಸ್ತರಣೆ ಬಗ್ಗೆ ಅಮಿತ್ ಶಾ ಜೊತೆ ಮಾತನಾಡಿದ್ದೇನೆ-ಸಿಎಂ ಯಡಿಯೂರಪ್ಪ.!

ಈಗಷ್ಟೇ ಅಮಿತ್ ಷಾ ಜತೆ ಮಾತನಾಡಿದ್ದೇನೆ.ಇನ್ನು ಎರಡು ದಿನಗಳಲ್ಲಿ ಪಟ್ಟಿ ಕಳುಹಿಸಿಕೊಡುವುದಾಗಿ ಹೇಳಿದ್ದಾರೆ.ಸಚಿವ ಸಂಪುಟದ ವಿಷಯ ಕ್ಲಿಯರ್ ಆಗುತ್ತೆ. ವೀರಶೈವ ಲಿಂಗಾಯಿತರನ್ನು ಓಬಿಸಿಗೆ ಸೇರಿಸುವ ಬಗ್ಗೆ ಇಂದು ಯಾವುದೇ ತೀರ್ಮಾನ ಮಾಡಲ್ಲ.ಮಹತ್ವದ ಕಾರಣಕ್ಕೆ ಲಿಂಗಾಯಿತರ ಬಗ್ಗೆ ಓಬಿಸಿಗೆ ಸೇರಿಸಲು ನಿರ್ಧರಿಸಿದ್ದೆವು.ಆದರೆ,ದೆಹಲಿಗೆ ಹೋಗಿ ಚರ್ಚಿಸಿದ ಬಳಿಕ ಅದರ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ.ಯಾವುದೇ ಆತುರದ ತೀರ್ಮಾನ ಕೈಗೊಳ್ಳದಂತೆ ಸಂಪುಟ ಸಹೋದ್ಯೋಗಿಗಳು ಸಲಹೆ ಮಾಡಿದ್ದಾರೆ. ಹಾಗಾಗಿ ದೆಹಲಿಗೆ ಹೋಗಿ ಬಂದ ಬಳಿಕವಷ್ಟೇ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment