ಕೋಲಾರದಲ್ಲಿ ಮಳೆಯಿಂದ ಭಾರೀ ಹಾನಿ…!

ಕೋಲಾರ: ನಿವಾರ್ ಚಂಡ ಮಾರುತದ ಪರಿಣಾಮದಿಂದ ರಾಜ್ಯದ ಗಡಿ ಜಿಲ್ಲೆ ಕೋಲಾರ ದಲ್ಲಿಯೂ ಭಾರೀ ಮಳೆಯಾಗಿದೆ. ಕಳೆದ ರಾತ್ರಿಯಿಂದ ಜಿಲ್ಲೆಯಾದ್ಯಂತ ಮಳೆ ಯಾಗಿದೆ. ಒಟ್ಟು ಐದು ದಿನಗಳ ಕಾಲ ಮಳೆಯಾಗಲಿದ್ದು ಇಂದು ಭಾರೀ ಮಳೆಯ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಜಿಲ್ಲೆಯ ತಾಲೂಕುವಾರು ಮಳೆಯ ಪ್ರಮಾಣ ವನ್ನು ಈಗ ನೋಡೋದಾದ್ರೆ, ಮುಳಬಾಗಿಲಿನಲ್ಲಿ ಅತೀ ಹೆಚ್ಚು ಅಂದ್ರೆ 137.2 . ಮಿಲಿ ಮೀಟರ್ ಮಳೆಯಾಗಲಿದೆ. ಬಂಗಾರಪೇಟೆ ತಾಲೂಕಿನಲ್ಲಿ 133.4 ಮಿಲಿ ಮೀಟರ್ ಮೀಟರ್ ಮಳೆಯಾಗಲಿದೆ. ಕೋಲಾರ ತಾಲೂಕಿನಲ್ಲಿ 123.1 ಮಿಲಿ ಮೀಟರ್, ಶ್ರೀನಿವಾಸಪುರ 119.8 ಮಿ.ಮಿ, ಮಾಲೂರಿನಲ್ಲಿ 95 ಮಿಲಿ ಮೀಟರ್ ಮಳೆಯಾಗಲಿದೆ. ಅಲ್ಲದೇ ಮುಳಬಾಗಿಲು ತಾಲೂಕಿನ ಬೈರಕೂರು ಹೋಬಳಿಯ ಪೇರಕನಹಳ್ಳಿ, ಸಿದ್ದನಹಳ್ಳಿ, ತೊಂಡ್ಡಪಲ್ಲಿ, ಕಾಡೇನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮಳೆ ಅವಾಂತರವನ್ನೇ ಸೃಷ್ಟಿಮಾಡಿದ್ದು, ಅಪಾರ ಪ್ರಮಾಣದ ಬೆಳೆ, ಮನೆಗಳು ಹಾನಿಯಾಗಿದೆ. ಇನ್ನೂ ಕೆರೆಗಳಿಗೆ ನೀರು ತುಂಬಿರುವುರಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ವರದಿ- ವಿ.ರಾಮಕೃಷ್ನ ಎಕ್ಸ್ ಪ್ರೆಸ್ ಟಿವಿ ಕೋಲಾರ

Please follow and like us:

Related posts

Leave a Comment