ಡಾ.ಬಿ.ಆರ್ ನಾಗರಾಜು ಅವರಿಗೆ ರಕ್ಷಣೆ ನೀಡುವಂತೆ ಡಿವೈಎಸ್ಪಿಗೆ ಮನವಿ..!

ಮಳವಳ್ಳಿ: ಮಳವಳ್ಳಿಯಲ್ಲಿ ಅಂಬೇಡ್ಕರ್ ಕ್ರಾಂತಿದಳ ರಾಜ್ಯಾಧ್ಯಕ ಡಾ.ಬಿ.ಆರ್ ನಾಗರಾಜುರವರ ಮೇಲೆ ಸಬ್ ಇನ್ಸ್ ಪೆಕ್ಟರ್ ಡಿ ರವಿಕುಮಾರ್ ದೌರ್ಜನ್ಯ ನಡೆಸಿದ್ದು ಅವರ ಮೇಲೆ ಕಾನೂನು ಕ್ರಮ ಕೈ ಗೊಂಡು ಬಂಧಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಮನವಿಯನ್ನು ಪ್ರಜಾ ವಿಮೋಚನಾ ಚಳುವಳಿ ತಾಲ್ಲೂಕು ಅಧ್ಯಕ್ಷ ಅಧ್ಯಕ್ಷ ಡಿ ನಾಗರಾಜ್ ನೇತೃತ್ವದಲ್ಲಿ ಪದಾಧಿಕಾರಿಗಳು ಡಿವೈಎಸ್ ಪಿಗೆ ನೀಡಿದ್ರು. ಅಲ್ಲದೇ ಕ್ರಾಂತಿ ದಳ ನಾಗರಾಜುರವರ ಹತ್ಯೆಯ ಪ್ರಯತ್ನ ಸಹ ನಡೆದಿದ್ದು ಈ ಸಂಬಂದ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಗಿದ್ದು, ಅವರ ರಕ್ಷಣೆಗಾಗಿ ಇಬ್ಬರು ಗನ್ ಮ್ಯಾನ್ ನೇಮಿಸಬೇಕು ಎಂದು ಒತ್ತಾಯಿಸಿದ್ರು. ಈ ಸಂದರ್ಭದಲ್ಲಿ ಬೂವಳ್ಳಿಸಿದ್ದಯ್ಯ .ಸಿದ್ದರಾಜು, ಜಯಕೃಷ್ಣಮೂರ್ತಿ, ನಂಜುಂಡಸ್ವಾಮಿ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

ವರದಿ-ಎ ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment