ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ..!

ಸಿಂಧನೂರು: ನಗರ ಸಭೆಯ ಸಭಾಂಗಣದಲ್ಲಿ ಪ್ರಥಮ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷರ ಮಲ್ಲಿಕಾರ್ಜುನ ಪೋಲಿಸ್ ಪಾಟೀಲ್ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಪಕ್ಷಭೇದ ಮರೆತು ನಗರ ಅಭಿವೃದ್ಧಿಗಾಗಿ ಸಭೆಯಲ್ಲಿ ಚರ್ಚೆ ನಡೆಸಿದರು. ನಗರಸಭೆ ಸದಸ್ಯರನ್ನು ಪೌರಾಯುಕ್ತರು ಸೇರಿದಂತೆ ಇತರೆ ಅಧಿಕಾರಿಗಳು ಎರಡೂ ವರ್ಷಗಳ ಕಾಲ ಕಡೆಗಣಿಸಿದ್ದನ್ನು ವಿಚಾರವಾಗಿ ಇಟ್ಟುಕೊಂಡು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. 2018 ರಿಂದ 22-ಅಕ್ಟೋಬರ್ 2020 ರ ವರೆಗೆ ನಗರಸಭೆಗೆ ನಡೆದ ಜಮಾ ಖರ್ಚುಗಳ ಬಗ್ಗೆ ಮಂಡಿಸಿ ಅನುಮೋದನೆ ನೀಡುವ ವಿಚಾರಕ್ಕೆ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಮಾತನಾಡಿ 2 ವರ್ಷಗಳ ನಗರಸಭೆಯಲ್ಲಿ ತುಘಲಕ್ ದರ್ಬಾರ್ ನಡೆದಿದ್ದು. ತೆರಿಗೆ ಹಣ 9 ಕೋಟಿ ಯಾವ ರೀತಿ ಬಳಕೆ ಮಾಡಿಕೊಳ್ಳಲಾಗಿದೆ. ಯಾವ ಸದಸ್ಯರಿಗೂ ಸ್ಪಷ್ಟವಾದ ಮಾಹಿತಿ ಇಲ್ಲ. ದರ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚೆಗೆ ಅವಕಾಶ ಕೊಡಬೇಕು.ಜೊತೆಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದಾಗ ನಗರಸಭೆ ಸದಸ್ಯ ಶೇಖರಪ್ಪ ಗಿಣಿವಾರ ಪೌರಾಯುಕ್ತ ಆರ್ .ವಿರೂಪಾಕ್ಷ ಮೂರ್ತಿ ಅವರ ನಡುವೆ ಮಾತಿನ ಚಕಮಕಿ ನಡೆಯಿತು.ಎಲ್ಲ ಸದಸ್ಯರ ಒಪ್ಪಿಗೆ ಮೇರೆಗೆ ಈ ಜಮಾ ಮತ್ತು ಖರ್ಚನ್ನು ಮುಂದಿನ ಸಭೆಯಲ್ಲಿ ಚರ್ಚೆ ನಡೆಸಲು ನಿರ್ಣಯ ಕೈಗೊಳ್ಳಲಾಯಿತು.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment