ಮನೆ ಮನೆಗೆ ಕುಡಿಯುವ ನೀರಿನ ಯೋಜನೆಗೆ ಚಾಲನೆ- ಹರ್ಷಾನಂದ ಗುತ್ತೇದಾರ..!

ಕಲಬುರಗಿ: ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಆಲೂರ (ಬಿ) ಗ್ರಾಮದಲ್ಲಿ ಜಲ ಜೀವನ ಮೀಶನ್ ಯೋಜನೆಯ ಅಡಿಯಲ್ಲಿ 31 ಲಕ್ಷ ವೆಚ್ಚದ ಮನೆ ಮನೆ ಕುಡಿಯುವ ನೀರಿನ ನಳದ ಪೈಲೈನ ಕಾಮಗಾರಿ ಹಾಗೂ ೧೭ ಲಕ್ಷದ ಸಿ.ಸಿ ರಸ್ತೆಗೆ ಜಿಲ್ಲಾ ಪಂಚಾಯತ ಸದಸ್ಯ ಹರ್ಷಾನಂದ ಗುತ್ತೇದಾರ ಚಾಲನೆ ನೀಡಿದರು. ನಂತರ ಮಾತನಾಡಿ ಪ್ರತಿಯೊಂದು ಹಳ್ಳಿಗಳು ಅಭಿವೃದ್ದಿ ಹೊಂದಿಬೇಕೆಂದು ಪ್ರದಾನಿ ಮೋದಿಜಿ ಕನಸು ಕಂಡಿದ್ದಾರೆ ಅದರಂತೆ ಪ್ರತಿ ಹಳ್ಳಿಯ ಮನೆ ಮನೆಗೂ ನೀರು ಒದಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಜಿ.ಪಂ ಸದಸ್ಯ ಹರ್ಷಾನಂದ ಗುತ್ತೇದಾರ ಹೇಳಿದರು. ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗಿದೆ ಬೆಸಿಗೆಯಲ್ಲಿ ನೀರಿನ ಸಮಸ್ಯೆ ಬರದಂತೆ ಕ್ರಮ ವಸಹಿಲಾಗುತ್ತಿದೆ. ಅದರಂತೆ ಅಮರ್ಜಾ ಆಣೆಕಟ್ಟು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ ದಾರಿಯಲ್ಲಿ ಹಾದು ಹೋಗುವ ಗ್ರಾಮಗಳ ಪ್ರತಿ ಮನೆ ಮನೆಗೂ ನಳದ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಮುಖಂಡ ವಿರಣ್ಣಾ ಮಂಗಾಣೆ ಮಾತನಾಡಿ ಮಾನ್ಯ ಶಾಸಕರಾದ ಸುಭಾಷ ಆರ್ ಗುತ್ತೇದಾರ ಜನಪರ ನಾಯಕರಾಗಿದ್ದು ಎಲ್ಲ ಕಡೆ ಉತ್ತಮ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ ಪ್ರತಿ ಗ್ರಾಮಗಳಿಗೂ ಉತ್ತಮ ರಸ್ತೆ ನಿರ್ಮಸುತ್ತಿದ್ದಾರೆ. ಇದರಿಂದ ಗ್ರಾಮದ ಜನರಿಗೆ ಅನಕೂಲವಾಲಿದೆ ಅವರ ಕಾರ್ಯ ಮೆಚ್ಚುವಂಥದ್ದು ಎಂದರು. ನಂತರ ಸಮೀಪದ ಸುಂಟನೂರನಲ್ಲಿ ೭೨ ಲಕ್ಷ ಧರ್ಮವಾಡಿಯಲ್ಲಿ ೫೭ ಲಕ್ಷ ಬಸವಂತವಾಡಿಯಲ್ಲಿ ೩೭ ಲಕ್ಷದ ಮನೆ ಮನೆ ನಳದ ಪೈಪಲೈನ ಕಾಮಗಾರಿಗೆ ಪೂಜೆ ಸಲ್ಲಿಸಿದರು. ಅಧಿಕಾರಿಗಳಾದ ಚಂದ್ರಮೌಳಿ ಸಂಪತ್ತಕುಮಾರ ತಾ.ಪಂ ಸದಸ್ಯ ಬಸವರಾಜ ಸಾಣಕ ಗುತ್ತಿಗೆದಾರ ಶಿವಲಿಂಗಪ್ಪ ವಿ ಎಳಮೇಳ ಮುಖಂಡ ಮೈಬುಬ ಪಟೇಲ ನಿಂಬರ್ಗಾ ವಿಠ್ಠಲ ಜಮಾದಾರ ಸಂಗಯ್ಯ ಮಠಪತಿ ಅರ್ಜುನ ವಗ್ಗನ ದತ್ತರಾಯ ಹುಲಿಮನಿ ರಾಹುಲ ಶಟಗಾರ ಫಕ್ರುದ್ದಿನ ಶಿವಯಪುತ್ರ ಹೊಸಮನಿ ನಿಲಕಂಠ ಪಾಟೀಲ ಸಂತೋಷ ಚವ್ಹಾಣ ಶಿವಶರಣ ಕಡಗನ ಸೇರಿದಂತೆ ಅನೇಕರು ಇದ್ದರು.

ವರದಿ-ರಾಜಕುಮಾರ ಹಿರೇಮಠ ಎಕ್ಸ ಪ್ರೆಸ್ ಟಿವಿ ಆಳಂದ

Please follow and like us:

Related posts

Leave a Comment