ದರೋಡೆಗೆ ಹೊಂಚು ಹಾಕಿದ್ದ ನಾಲ್ವರ ಬಂಧನ..!

ಮಳವಳ್ಳಿ: ಶೋಕಿಗಾಗಿ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 4 ಮಂದಿಯನ್ನು ಬಂಧಿಸುವಲ್ಲಿ ಮಳವಳ್ಳಿ ಪಟ್ಟಣದ ಪೊಲೀಸರು ಯಶ್ವಸಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನಂದಗುಡಿ ಗ್ರಾಮ ಇರ್ಫಾನ್, 28.ಸೈಯದ್ ಶಬೀರ್ 26. ಪೈರೋಜ್ 27 , ಶಾಮೀರ್ ಅಹಮದ್ 27 , ಬಂಧಿತ ಆರೋಪಿಗಳು. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಬಳಿ ಮಳವಳ್ಳಿ ಪಟ್ಟಣದ ಇನ್ಸ್ ಪೆಕ್ಟರ್ ಎ.ಕೆ ರಾಜೇಶ್ ಹಾಗೂ ಸಿಬ್ಬಂದಿಗಳಾದ ಮಾದೇಶ ,ಶಿವಕುಮಾರ್ ಗಸ್ತು ಮಾಡುವ ವೇಳೆ ರಾವಣಿ ರಸ್ತೆ ಕ್ರಾಸ್ ಬಳಿ ಕಾರು ನಿಂತಿದ್ದನ್ನು ಕಂಡು ಪೊಲೀಸರು ಕಾರಿನ ಹೋದ ತಕ್ಷಣ. ಕಾರಿನಿಂದ ಒಬ್ಬ ಪೊಲೀಸರನ್ನು ನೋಡಿ ಓಡಿಹೋದನು.ಬಳಿಕ ಉಳಿದವರು ಸಹ ತಪ್ಪಿಸಿಕೊಳ್ಳಲು ಯತ್ನಿಸಿದಾಗ.ಗಸ್ತಿನಲ್ಲಿದ ಪೇದೆಗಳಾದ ಮಾದೇಶ್, ಶಿವಕುಮಾರಗಳು ಆರೋಪಿಗಳನ್ನು ಹಿಡಿದುಕೊಂಡರು ಎನ್ನಲಾಗಿದೆ. ಇನ್ನೂ ಈ ವೇಳೆ ಒಬ್ಬ ತಲೆ ಮರೆಸಿಕೊಂಡಿದ್ದಾನೆ. ಕಾರಿನ ಡಿಕ್ಕಿಯನ್ನು ಪರಿಶೀಲನೆ ನಡೆಸುವ ವೇಳೆ ಒಂದು ಕಬ್ಬಿಣದ ಲಾಂಗ್ ,ಚಾಕು, ಒಂದು ಪೊಟ್ಟಣ ಖಾರದಪುಡಿ, 4 ಮಂಕಿ ಕ್ಯಾಪ್, ಸಿಕ್ಕಿದ್ದು, ಆರೋಪಿಗಳು ಸೋಕಿಗಾಗಿ ವಾಹನಗಳನ್ನು ಅಡ್ಡಗಟ್ಟಿ, ಸಾರ್ವಜನಿಕರನ್ನು ಅಡ್ಡಗಟ್ಟಿ ಹಣವನ್ನು ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ.ಆರೋಪಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ ಒಂದು ಮಾರುತಿ ಜೆನ್ ಕಾರು, ಒಂದು ಕಬ್ಬಿಣದ ಲಾಂಗ್,ಚಾಕು, ಒಂದು ಪೊಟ್ಟಣ ಖಾರದಪುಡಿ, 4 ಮಂಕಿ ಕ್ಯಾಪ್ಗ ಳನ್ನು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಮಳವಳ್ಳಿ ಪಟ್ಟಣದ ಪೊಲೀಸಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ,ಮುಂದಿನ ತನಿಖೆ ಕೈಗೊಂಡಿದ್ದಾರೆ.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment