ಸರಕಾರಿ ವಾಹನ ಮನೆ ಕೆಲಸಕ್ಕೆ ಬಳಕೆ- ಗ್ರಾಮಸ್ಥರಿಂದ ಅಧಿಕಾರಿಗಳ ವಿರುದ್ಧ ಆಕ್ರೋಶ..!

ವಿಜಯಪುರ: ಸಾರ್ವಜನಿಕ ಕೆಲಸಗಳನ್ನು ಸಲೀಸಾಗಿ ನಿರ್ವಹಿಸಲೆಂದು 24/7 ನೀಡಿರುವ ಸರಕಾರಿ ವಾಹನವನ್ನು ಕಛೇರಿ ಕೆಲಸ ಕಾರ್ಯಗಳಿಗೆ ಬಳಸದೇ ತಮ್ಮ ಖಾಸಗಿ ಹಾಗೂ ಕುಟುಂಬದ ಕೆಲಸಕ್ಕೆ ಕಾರ್ಯಗಳಿಗೆ ಬಳಕೆ ಮಾಡುತ್ತಿರುವುದು ಇಂಡಿ ತಾಲ್ಲೂಕಿನ ವಿದ್ಯತ್ ಸರಬರಾಜು ಕಛೇರಿಯಲ್ಲಿ ಕಂಡು ಬಂದಿದ್ದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಉಪ ವಿಭಾಗ ಇಂಡಿಯ ಕಛೇರಿಗೆ ನೀಡಿರುವ 24/7 ಗೂಡ್ಸ ವಾಹನವನ್ನು ಅಧಿಕಾರಿಗಳು ತಮ್ಮ ವಯ್ಯಕ್ತಿಕ ಹಾಗೂ ಕುಟುಂಬದ ಕೆಲಸ ಕ್ಕೆ ಬಳಕೆ ಮಾಡುತ್ತಿದ್ದಾರೆ. ಇನ್ನಾದರೂ ಸರ್ಕಾರಿಯ ವಾಹನಗಳನ್ನು ಸರಕಾರಿ ಕೆಲಸಕ್ಕೆ ಮಾತ್ರ ಬಳಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಅಲ್ಲಿದ್ದ ಪ್ರತ್ಯಕ್ಷದರ್ಶಿಗಳು ಕಿಡಿಕಾರಿದರು. ಸರಕಾರದ ವಾಹನವನ್ನು ಅಧಿಕಾರಿಗಳು ತಮ್ಮ ಖಾಸಗಿ ಐಷರಾಮಿ ಬದುಕಿಗೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳು ಮೇಲಿಂದ ಮೇಲೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದರೂ, ಇಂತಹ ಅಧಿಕಾರಿಗಳ ವಿರುದ್ದ ಸರಕಾರ ಸೂಕ್ತ ಕ್ರಮಕ್ಕೆ ಮುಂದಾಗುವುದೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ

Please follow and like us:

Related posts

Leave a Comment