ಬಿಜೆಪಿ ಯುವ ಮೊರ್ಚಾ ವತಿಯಿಂದ ಸ್ವಚ್ಚತಾ ಅಭಿಯಾನ..!

ಸಿಂದಗಿ: ಸುಮಾರು 18ನೇ ಶತಮಾನದ ಚಾರಿತ್ಯ ಹೊಂದಿರುವ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹಂದಿಗನೂರ ಗ್ರಾಮದ ಚಿರಲಿಂಗೇಶ್ವರ ಮಠದಲ್ಲಿ ಬಿಜೆಪಿಯ ಯುವ ಮೊರ್ಚಾ ಸಿಂದಗಿ ಮಂಡಲ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಯುವ ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಬಗಲಿ ಮಾತನಾಡಿ ಇಂದಿನ ಯುವಕರೆ ನಾಳಿನ ನಾಯಕರು, ಹಾಗೂ ದೇಶ ಸೇವೆಯ ಕಾರ್ಯ ಎಲ್ಲರಿಗೂ ಸಿಗುವುದಿಲ್ಲ. ಬದಲಿಗೆ ನಮ್ಮೆಲ್ಲರಿಗೂ ಸಿಕ್ಕಿದೆ. ಅದನ್ನು ಸರಿಯಾಗಿ ನಿರ್ವಹಿಸೋಣ ಎಂದರು. ಇನ್ನೂ ಯುವ ಮೋರ್ಚಾ ಕಾರ್ಯದರ್ಶಿ ಎಸ್ ಆರ್ ಪಾಟೀಲ ಅವರು ಮಾತನಾಡಿ ಸ್ವಚ್ಛತಾ ಹಿ ಸೇವಾ – ಸೇವಾ ಹಿ ಸಂಘಟನಾ ಎಂಬ ಮಾತಿನಂತೆ ಒಂದು ಹೆಜ್ಜೆ ಸ್ವಚ್ಚತೆಯಡೆಗೆ ಸಾಗುತ್ತಾ ದೇಶ ಸೇವೆಯ ಕಾರ್ಯ ಮಾಡೋಣ ಹಾಗೂ ಪ್ರಧಾನ ಮಂತ್ರಿ ಅವರು ಕಂಡ ಕನಸು ನನಸು ಮಾಡುವಲ್ಲಿ ನಾವೆಲ್ಲರೂ ಮುಂದೆ ಸಾಗೋಣ ಎಂದರು . ರೈತ ಮೋರ್ಚಾ ಅಧ್ಯಕ್ಷರಾದ ಅಶೋಕ ಅಂಚೆಗಾವಿ ಅವರು ಮಾತನಾಡು ಮಠಗಳು (ದೇವಾಲಯಗಳು) ಸ್ವಚ್ಛವಾಗಿರುವ ಹಾಗೆ ನಿಮ್ಮೆಲ್ಲರ ಮನಸ್ಸು ಸ್ವಚ್ಛವಾಗಿರಲಿ ಎಂದು ಎಲ್ಲರಿಗೂ ಹರಸಿ ಸ್ಪೂರ್ತಿ ತುಂಬಿದರು ಸ್ವಚ್ಚ ಭಾರತ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಮೊರ್ಚಾ ಕಾರ್ಯಕರ್ತರು ಪದಾಧಿಕಾರಿಗಳೆಲ್ಲರು ಭಾಗವಹಿಸಿದರು.

ವರದಿ- ಅಂಬರೀಶ್ ಸುಣಗಾರ ಎಕ್ಸ್ ಪ್ರೆಸ್ಸ್ ಟಿವಿ ಸಿಂದಗಿ

Please follow and like us:

Related posts

Leave a Comment