ತಿಪಟೂರು:ನಗರದ ಎಸ್ ವಿ ಪಿ ವಿದ್ಯಾಸಂಸ್ಥೆ ಆವರಣದಲ್ಲಿ ಕನಕದಾಸರ 533 ನೇ ಜಯಂತಿ ಕಾರ್ಯಕ್ರಮ ಆಚರಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕ ಶ್ರೀ ಕೆ ಎನ್ ರೇಣುಕಯ್ಯ ಕನ್ನಡ ಸಾಹಿತ್ಯದ ದಾಸ ಪರಂಪರೆಯಲ್ಲಿ ಅದ್ವಿತೀಯ ದಾರ್ಮಿಕ ಕ್ರಾಂತಿ ಮಾಡಿದ ಶ್ರೇಷ್ಠ ಕೀರ್ತನ ಕಾರರು ಕನಕ ದಾಸರು . ಅಂದಿನ ಸಮಾಜ ವ್ಯವಸ್ಥೆಯಲ್ಲಿ ನೆಲೆಯೂರಿದ್ದ ಜಾತಿ ವರ್ಗ ವರ್ಣಗಳ ವಿರುದ್ದ ಅಮೂಲ್ಯವಾದ ಕೀರ್ಥನೆಗಳ ಮೂಲಕ ಜಾಗೃತಿ ಮೂಡಿಸಿದರು, ಜಗತ್ತಿನಲ್ಲಿಯೇ ಯಾರು ಬರೆಯದ ದವಸ ದಾನ್ಯಗಳನ್ನು ಕುರಿತು ರಾಮಾಧಾನ್ಯ ಚರಿತೆ ಕೃತಿ ರಚನೆಯ ಮೂಲಕ ವೈಚಾರಿಕ ಸತ್ಯ ಸಂದೇಶಗಳನ್ನು ಮುಟ್ಟಿಸಿದರು ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲರು, ಮುಖ್ಯಶಿಕ್ಷಕರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ಸ್ ಟಿವಿ ತಿಪಟೂರು.
Read MoreDay: December 3, 2020
ನಿವೃತ್ತಿ ನಂತರ ಮರಳಿದ ಯೋಧನಿಗೆ ತವರೂರಲ್ಲಿ ಅದ್ಧೂರಿ ಸ್ವಾಗತ..!
ವಿಜಯಪುರ: ಭಾರತಿ ಸೇನಾ ಪಡೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿಯಾಗಿ ತವರೂರಿಗೆ ಬಂದ ಯೋಧನಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ. ಸೈನಿಕ ಅಮೀರ ಚಂದ ಅಲ್ಲಾವುದ್ದೀನ್ ಜಕಾತದಾರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಂಜುಟಗಿ ಗ್ರಾಮದವರಾಗಿದ್ದು, ಇವರನ್ನ ಅಂಜುಟಗಿ ಗ್ರಾಮಸ್ಥರು ವಿಶೇಷ ಸ್ವಾಗತ ಮಾಡಿಕೊಂಡರು. ತಾಲೂಕಿನ ಅಂಜುಟಗಿ ಗ್ರಾಮದ ಅಲ್ಲಾವುದ್ದೀನ್ ಪುತ್ರ ಅಮೀರಚಾಂದ ದಿನಾಂಕ 25/11/2003 ರಂದು ಭಾರತೀಯ ಸೇನೆಯಲ್ಲಿ ಭರ್ತಿಯಾಗಿ ಕರ್ನಾಟಕದ ಬೆಳಗಾವಿ ಜಿಲ್ಲೆಯಿಂದ ತಮ್ಮ ಸೇವೆ ಪ್ರಾರಂಭ ಮಾಡಿ ಸಿಕಂದರಾಬಾದ್, ಮಣಿಪುರ, ಜಮ್ಮು ಕಾಶ್ಮೀರ, ಪೊಚ್ ಸೆಕ್ಟರ್, ಕೃಷ್ಣಾ ಘಾಟ್, ಬಾಂದಿಪೂರ, ಪಂಜಾಬ್, ಗುಜರಾತ್ ಹಾಗೂ ಜಮ್ಮು ಕಾಶ್ಮೀರ ದ ದ್ರಾಸ್ ಸೆಕ್ಟರ್ ಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ್ದು ಗ್ರಾಮಸ್ಥರು ಚಪ್ಪಾಳೆ ತಟ್ಟಿ ಗೌರವ ಸಲ್ಲಿಸುವ ಮೂಲಕ ಸ್ವಾಗತ ಕೋರಿದರು.ವೇದಿಕೆ ಜಿಲ್ಲಾಧ್ಯಕ್ಷ ಅಣ್ಣಾರಾಯ ಬಬಲಾದ ಮಾತನಾಡಿ, ದೇಶದೊಳಗೆ ನಾವು ನೆಮ್ಮದಿಯಿಂದ…
Read Moreವಿವಿಧ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ..!
ತಿಪಟೂರು: ತಿಪಟೂರು ತಾಲ್ಲೂಕು ಕಚೇರಿಯ ಮುಂದೆ ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟದ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯವನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ ಹಸಿರು ಸೇನೆ ಅಧ್ಯಕ್ಷ ತಿಮ್ಲಾಪುರ ದೇವರಾಜು ರವರು ದೆಹಲಿಯಲ್ಲಿ ನಡೆಯುತ್ತಿರುವ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ ಸರ್ಕಾರದ ಅಮಾನವೀಯ ನಡೆಯನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಕರೋನಾ ಲಾಕ್ ಡೌನ್ ನಿಂದ ರೈತರು ಮತ್ತು ಕಾರ್ಮಿಕರ ಬದುಕು ದುಸ್ತರವಾಗಿರುವ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರೈತ ಮತ್ತು ಕಾರ್ಮಿಕ ವಿರೋಧಿ ನೀತಿಗಳನ್ನು ತಂದಿರುವುದು ಅಮಾನವೀಯ ನಡೆ ಇಂತಹ ನೀತಿಯನ್ನು ಖಂಡಿಸಿ ರೈತ ಸಂಘಟನೆಗಳು ದೆಹಲಿ ಚಲೋ ಹಮ್ಮಿಕೊಂಡಿದೆ ಚಳುವಳಿಯನ್ನು ಹತ್ತಿಕ್ಕಲು ಹೊರಟಿರುವುದು ಅಕ್ಷಮ್ಯ ಅಪರಾಧವೆಂದರು.ರೈತ ಸಂಘದ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ ಕೇಂದ್ರ ಸರ್ಕಾರದ ನೀತಿಗಳು ರೈತರ…
Read Moreನೀತಿ ಸಂಹಿತೆಗೆ ಕ್ಯಾರೆ ಎನ್ನದೇ ಸರಕಾರಿ ವಾಹನ ಬಳಸುತ್ತಿರುವAPMC ಅದ್ಯಕ್ಷ..!
ಲಿಂಗಸಗೂರು: ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡಾ ಸರ್ಕಾರಿ ವಾಹನವನ್ನು ಬಳಸಿದ ಎಪಿಎಂಸಿ ಅಧ್ಯಕ್ಷ. ಚುನಾವಣೆ ಆಯೋಗ ಗ್ರಾಮಪಂಚಾಯತಿ ಚುನಾವಣೆ ದಿನಾಂಕ ನಿಗದಿ ಮಾಡಿ ನಿತಿಸಂಹಿತೆ ಜಾರಿಮಾಡಿದೆ. ಈಗಾಗಲೆ ಸಚಿವರುಗಳೆ ಸರಕಾರ ವಾಹನಗಳನ್ನು ಬಿಟ್ಟು ಖಾಸಗಿ ವಾಹನ ಹಿಡಿದಿದ್ದಾರೆ. ಆದರೆ ಲಿಂಗಸಗೂರು APMC ಅದ್ಯಕ್ಷ ಮಲ್ಲರೆಡ್ಡೆಪ್ಪ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಎನ್ನದೇ ಸರಕಾರ ವಾಹನ ಬಳಸುತ್ತಿದ್ದಾರೆ. ಈ ಬಗ್ಗೆ ತಾಸಿಲ್ದಾರ್ ಅವರಿಗೆ ಕೇಳಿದರೆ ನಮಗೆ ಮಾಹಿತಿ ಇಲ್ಲ ಕೂಡಲೆ ವಾಹನ ಹಿಂಪಡೆಯಲಾಗುವುದು ಎನ್ನುತ್ತಾರೆ. ವರದಿ- ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು
Read Moreಕಾಡಾನೆಗಳ ಹಾವಳಿಯಿಂದ ಬೇಸತ್ತಾ ಗ್ರಾಮಸ್ಥರು..!
ಮಳವಳ್ಳಿ: ಕಾಡಾನೆಗಳ ನಿರಂತರ ದಾಳಿಯಿಂದಾಗಿ ವರ್ಷದಿಂದ ಕಷ್ಟ ಪಟ್ಟು ಬೆಳೆದ ಫಸಲು ನಾಶವಾಗುತ್ತಿದೆ. ರೈತರು ಬದುಕು ನಡೆಸುವುದು ಬಹಳ ಕಷ್ಟವಾಗುತ್ತಿದೆ. ನಾಡಿಗೆ ಬಂದಿರುವ ಆನೆಗಳನ್ನು ಕಾಡಿಗೆ ಅಟ್ಟ ಬೇಕೆಂದು ಆಗ್ರಹಿಸಿ ಗುಂಡಾಪುರ ಗ್ರಾಮದ ರೈತರು ಹಲಗೂರು ವಲಯ ಅರಣ್ಯ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆಯನ್ನು ನಡೆಸಿದರು. ಬಸವನ ಬೆಟ್ಟ ಅರಣ್ಯ ವಲಯದಿಂದ ಬಂದ ಆನೆಗಳು ರಾಗಿ ಮತ್ತು ಭತ್ತ ಬೆಳೆ ಸೇರಿದಂತೆ ಕಟಾವು ಮಾಡಿರುವ ಮೆದೆಗಳನ್ನು ಸಹ ಹಾನಿ ಮಾಡುತ್ತಿವೆ. ಮಾವಿನ ಮರಗಳು, ಬಾಳೆಗಿಡಗಳು ಮತ್ತು ನೀರಿನ ಪೈಪುಗಳನ್ನು ಮುರಿದು ಹಾಕಿವೆ. ಆನೆಗಳ ಮೂರು ತಂಡಗಳು ಹದಿನೈದು ದಿನಗಳಿಂದ ನಿರಂತರವಾಗಿ ಗ್ರಾಮದ ಹಲವಾರು ರೈತರ ಫಸಲನ್ನು ಹಾನಿ ಮಾಡುತ್ತಿವೆ. ರಾತ್ರಿ ವೇಳೆಯಲ್ಲಿ ಆನೆಗಳು ಗ್ರಾಮದ ಕಡೆಗೆ ಬಂದು ಫಸಲು ಹಾನಿ ಮಾಡುತ್ತಿದೆ, ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಲು ಹೋದ್ರೆ ಯಾವುದೇ ರೀತಿ ಸ್ಪಂಧಿಸುತ್ತಿಲ್ಲ ಫೋನ್ ಮಾಡಿದರೇ…
Read Moreನಾಡ ಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ..!
ಕೋಲಾರ: ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಡಿವಿಜೆ ವೃತ್ತದಲ್ಲಿ ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಮುಳಬಾಗಿಲು ತಾಲೂಕಿನ ಒಕ್ಕಲಿಗರ ಮುಖಂಡರು ಗುದ್ದಲಿ ಪೂಜೆಯನ್ನು ನೆರವೇರಿಸಿದ್ರು. ಅಲ್ಲದೇ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮುಳಬಾಗಿಲು ಶಾಸಕ ಹೆಚ.ನಾಗೇಶ್ ಸ್ಥಳ ಪರಿಶೀಲನೆ ನಡೆಸಿದ್ರು. ಇನ್ನೂ ನಾಡ ಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಣಕ್ಕೆ ಕೆಂಪೇಗೌಡರ ರಥ ಮಾಡಿ ತಾಲೂಕಿನಾದ್ಯಾಂತ ರಥ ಸಂಚರಿಸಿ ದೇಣಿಗೆ ಸಂಗ್ರಹಿಸಿದ್ದು, ನಾಡ ಪ್ರಭು ಕೆಂಪೇಗೌಡ ಕೇವಲ ಒಂದು ಜಾತಿಗೆ ಸೀಮಿತವಲ್ಲ ಅವರು ಜಾತ್ಯಾತೀತ ನಾಯಕರು ಆದ್ದರಿಂದ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಕೆಂಪೇಗೌಡರ ರಥ ಸಂಚರಿಸಿ ಎಲ್ಲಾ ಜನರಿಂದ ದೇಣಿಗೆ ಸಂಗ್ರಹಿಸಿ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವುದಾಗಿ ಒಕ್ಕಲಿಗ ಮುಖಂಡರು ತಿಳಿಸಿದ್ರು. ಇನ್ನು ಕೆಂಪೇಗೌಡರ ಮುಂದಿನ ಹುಟ್ಟು ಹಬ್ಬಕ್ಕೆ ಪ್ರತಿಮೆಯನ್ನು ನಿರ್ಮಾಣ ಮಾಡುವುದಾಗಿ ತಳಿಸಿದ್ರು. ಅಲ್ಲದೇ ಯಾವ ರೀತಿ ಕೆಂಪೇಗೌಡರ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು ಎಂಬುದರ…
Read Moreಶಾಲಾ ಮಕ್ಕಳಿಗೆ ಬಿಸಿಯೂಟ ಆಹಾರ ಧಾನ್ಯ ವಿತರಣೆ..!
ಶಹಾಪುರ: ಶಹಾಪುರ ತಾಲ್ಲೂಕಿನ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಜೂನ್ ಹಾಗೂ ಜುಲೈ ತಿಂಗಳಿನ ಬಿಸಿಯೂಟದ ದವಸಧಾನ್ಯಗಳು ಎಸ್ಡಿಎಂಸಿ ಅಧ್ಯಕ್ಷರಾದ ಗುರುಲಿಂಗಪ್ಪ ಅಂಗಡಿ ವಿತರಿಸಿದರು.ದವಸ ಧಾನ್ಯಗಳ ವಿತರಣೆಯಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಂಡು ವಿತರಿಸಲಾಯಿತು. ಜತೆಗೆ ಮಹಾಮಾರಿ ಕರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸಿ ತಿಳಿ ಪಡಿಸಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಚಿದಾನಂದ ಹಿರೇಮಠ ಮತ್ತು ಸಹ ಶಿಕ್ಷಕರಾದ ಪರಸಪ್ಪ ಅಜಗಪನವರ ಹಾಗೂ ಇತರರು ಉಪಸ್ಥಿತರಿದ್ದರು. ವರದಿ- ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ
Read More